ಮಂಗಳೂರು: ವಿಶ್ವ ಧ್ಯಾನದ ದಿನವಾದ ಡಿ.21ರಂದು ವಿಶ್ವಸಂಸ್ಥೆಯಲ್ಲಿ ಶ್ರೀ ರವಿಶಂಕರ್ ಗುರೂಜಿ ಅವರು ಮುಖ್ಯ ಭಾಷಣ ಮಾಡಲಿದ್ದು ನಂತರ ಜಾಗತಿಕ ಧ್ಯಾನ ನೇರ ಪ್ರಸಾರವಾಗಲಿದೆ ಎಂದು ವಸಂತ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
ನ್ಯೂಯಾರ್ಕ್ ನ ವಿಶ್ವಸಂಸ್ಥೆಯ ಪರ್ಮನೆಂಟ್ ಮಿಷನ್ ಆಫ್ ಇಂಡಿಯಾ ಡಿ.21ರಂದು ವಿಶ್ವ ಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಪ್ರಥಮ ವಿಶ್ವ ಧ್ಯಾನದ ದಿನದ ಆಚರಣೆಗೆ ಸಿದ್ಧವಾಗುತ್ತಿದೆ. ಅಂದು ಮಂಗಳೂರಿನ ಶ್ರೀ ರವಿಶಂಕರ್ ವಿದ್ಯಾಮಂದಿರ ಸಹಿತ 21 ಕಡೆಗಳಲ್ಲಿ ಧ್ಯಾನದ ದಿನ ಆಚರಣೆ ನಡೆಯಲಿದೆ ಎಂದರು.
ಅಮಿತ ಸುಧೀರ್, ಸಹನಾ ಹೆಗ್ಡೆ, ಶ್ರೀಯಾ, ಬೀನಾ ಮತ್ತಿತರರು ಉಪಸ್ಥಿತರಿದ್ದರು.



