ಜನ ಮನದ ನಾಡಿ ಮಿಡಿತ

Advertisement

ಸಹಕಾರಿ ಬಳಗಕ್ಕೆ ಜಯ….!ಸಹಕಾರ ಭಾರತಿಗೆ ಮುಖಬಂಗ…!

ಸಹಕಾರಿ ಬಳಗಕ್ಕೆ ಜಯ….!ಸಹಕಾರ ಭಾರತಿಗೆ ಮುಖಬಂಗ…!

ಆಲಂಕಾರು: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ನ್ಯಾಯಾಲಯ ಆದೇಶದ ಅರ್ಹ ಮತದಾರರ ಮತದಾನದ ಹೊರತಾಗಿ ರಮೇಶ್ ಭಟ್ ಉಪ್ಪಂಗಳ ಸಹಕಾರಿ ಬಳಗ ಜಯಭೇರಿ ಭಾರಿಸಿದ್ದು, ಹನ್ನೆರಡು ಸ್ಥಾನಗಳ ಪೈಕಿ ಹತ್ತರಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದೆ.

ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಕೇವಲ ಎರಡು ಸ್ಥಾನಗಳಲ್ಲಿ ಜಯ ಸಾಧಿಸಿ ತೀವ್ರ ಮುಖಬಂಗ ಅನುಭವಿಸಿದೆ. ಆದರೆ ನ್ಯಾಯಾಲಯದ ಆದೇಶದಂತೆ ಫಲಿತಾಂಶ ಘೋಷಣೆಗೆ ತಡೆ ನೀಡಲಾಗಿದೆ. ಭಾರೀ ಜಿದ್ದಾಜಿದ್ದಿನ ಹೋರಾಟದಲ್ಲಿ ಬಿಜೆಪಿಯಿಂದ ಸಿಡಿದೆದ್ದಿರುವ ರಮೇಶ್ ಭಟ್ ಉಪ್ಪಂಗಳ ಬಳಗ ಮೇಲುಗೈ ಸಾಧಿಸಿದರೂ ಸಂಘದ ಸದಸ್ಯರೊಬ್ಬರು ನ್ಯಾಯಾಲಯದಿಂದ ಸುಮಾರು 440 ಅನರ್ಹ ಮತದಾರರಿಗೆ ಮತದಾನಕ್ಕೆ ಅರ್ಹತೆ ಪಡೆದು ಬಂದು ಮತದಾನಕ್ಕೆ ಅವಕಾಶ ದೊರೆತಿರುವುದುರಿಂದ ಸಹಕಾರ ಭಾರತಿ ಅಲ್ಲಿ ಮುನ್ನಡೆಯನ್ನು ಕಾಯ್ದುಕೊಂಡು ನ್ಯಾಯಾಲಯದಲ್ಲಿ ಗೆಲುವು ಸಾಧಿಸುವ ಆಶಾಭಾವನೆಯಲ್ಲಿದೆ. ಸಂಘದಿOದ ಅರ್ಹ ಮತದಾರರಿಗೆ ನಡೆದ ಮತದಾನ ಹಾಗೂ ನ್ಯಾಯಲಯದಿಂದ ಅರ್ಹತೆ ಪಡೆದು ನಡೆದ ಮತದಾನದ ಒಟ್ಟು ಮತಗಳ ಕ್ರೂಢೀಕರಣವಾದರೆ ಸಹಕಾರ ಭಾರತಿ ಮೇಲುಗೈ ಸಾಧಿಸಲಿದೆ ಎನ್ನುವ ಲೆಕ್ಕಚಾರ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಉಪ್ಪಂಗಳ ಸಹಕಾರಿ ಬಳಗದ ಮುಖಂಡರಾದ ರಮೇಶ್ ಎನ್.ಸಿ., ಜನಾರ್ಧನ ಗೌಡ ಕಯ್ಯಪೆ, ಸುಪ್ರಿತ್ ರೈ ಕೊಯಿಲ, ಶೇಖರ ಹಿರಿಂಜ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!