ಸಾಲೆತ್ತೂರು;ಹಿರಿಯರ ಕಾಲದಲ್ಲಿ ಸರಕಾರಿ ಶಾಲೆಯಲ್ಲಿ ಗಣೇಶನನ್ನು ಕೂರಿಸಿ ಅಲ್ಲಿ ಗಣಪನಿಗೆ ಚೌತಿಯಂದು ಆರಾಧನೆ ನಡೆಯುತ್ತಿತ್ತು. ಕಾಲ ಕ್ರಮೇಣ ಅದೇ ವಾಡಿಕೆ ಮುಂದುವರಿದಿದ್ದು, ಇದೀಗ ಸ್ವಂತ ಕಟ್ಟಡವನ್ನು ಸಾಲೆತ್ತೂರು ಸರಕಾರಿ ಶಾಲಾ ಬಳಿ ಸಮಿತಿಯು ದಾನಿಗಳ ಸಹಕಾರದಿಂದ ಖರೀದಿಸಿದೆ.

ಮಾ.17ರಂದು ಬೆಳಗ್ಗೆ 9.05ಕ್ಕೆ ಸಭಾಂಗಣದ ಶಿಲಾನ್ಯಾಸ ಕಾರ್ಯಕ್ರಮವು ನಡೆಯಲಿದೆ. ಇದರ ಪೂರ್ವಭಾವಿಯಾಗಿ ಶ್ರೀ ಗಣೇಶ ಸೇವಾ ಟ್ರಸ್ಟ್ (ರಿ) ಇದರ ಸಭಾಂಗಣ ಶಿಲಾನ್ಯಾಸ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಶ್ರೀ ಸದಾಶಿವ ದೇವಸ್ಥಾನದಲ್ಲಿ ಹಿರಿಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯಿತು.




