ನಮಃ ಸ್ಟುಡಿಯೋಸ್ ಬ್ಯಾನರ್ನಲ್ಲಿ ನಿರ್ಮಿಸಲಾಗಿರುವ ಕೇಬಲ್ ಕನೆಕ್ಷನ್ ಶಾರ್ಟ್ ಮೂವಿ ಮಾ.14ರಂದು ಸಂಜೆ 6 ಗಂಟೆಗೆ ಖ್ಯಾತ ಯೂಟ್ಯುಬ್ ಚಾನಲ್ ಜೆಆರ್ಎಂ ಸ್ಟುಡಿಯೋದಲ್ಲಿ ಬಿಡುಗಡೆಗೊಳ್ಳಲಿದೆ.

ಈಗಾಗಲೇ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಸದ್ದು ಮಾಡುತ್ತಿದೆ. ಜೊತೆಗೆ ಸಿನಿಪ್ರಿಯರಲ್ಲಿ ಕೂತುಹಲ ಮೂಡಿಸಿದೆ. ಮನಮೋಹನ್ ಅಡೂರು ನಿರ್ದೇಶನದಲ್ಲಿ ಈ ಕಿರುಚಿತ್ರ ಮೂಡಿಬಂದಿದ್ದು, ಕರ್ಸ್ ಕನ್ನಡದ ಆರ್ಟ್ ಡೈರೆಕ್ಟರ್ ಆಗಿರುವ ಸಂತೋಷ್ ಪೂಜಾರಿ ಹಾಗೂ ವಿನುತಾ ಪೂಜಾರಿ ಬಂಡವಾಳ ಹೂಡಿದ್ದಾರೆ. ಪ್ರೀತಿಯನ್ನ ಪ್ರೀತಿಸುವುದು ಹೇಗೆ ಎಂಬಿತ್ಯಾದಿ ವಿಚಾರಗಳನ್ನ ಈ ಕಿರುಚಿತ್ರ ಬಿಚ್ಚಿಡಲಿದೆ. ಈ ಚಿತ್ರದಲ್ಲಿ ಸನತ್ ಕೆ ನಾಯಕನಾಗಿ ನಟಿಸಿದ್ದು, ಸಾನಿಕಾ ಪೂಜಾರಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನು ಈ ಕಿರುಚಿತ್ರದಲ್ಲಿ ನಿತೀನ್ ಅಮೀನ್, ಶಿವರಾಜ್ ಕರ್ಕೇರ, ಸುಕೇಶ್ ವೇಣೂರು ಸೇರಿದಂತೆ ಹಲವರು ಈ ಶಾರ್ಟ್ ಮೂವಿಯಲ್ಲಿ ಬಣ್ಣಹಚ್ಚಿದ್ದಾರೆ. ಇದೊಂದು ಪ್ರೀತಿಯ ಕಿರುಚಿತ್ರವಾಗಿದ್ದು, ಇದ್ರಲ್ಲಿ ಈಗಿನ ಯುವಕ ಯುವತಿಯರ ಲವ್ಲೈಫ್ ಜರ್ನಿಯನ್ನ ನಿಮ್ಮ ಮುಂದೆ ಪ್ರಸ್ತುಪಡಿಸಲಿದ್ದಾರೆ. ಒಟ್ಟಿನಲ್ಲಿ ನೋಡುಗರಿಗೆ ಮನರಂಜನೆಯAತೂ ಪಕ್ಕಾ.. ಮಿಸ್ ಮಾಡದೇ ನೋಡಿ ಕೇಬಲ್ ಕನೆಕ್ಷನ್…. ಕಿರುಚಿತ್ರ



