ಕಿನ್ನಿಗೋಳಿ: ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂಬುವುದು ಕಷ್ಟದ ದಿನಗಳು ಆ ದಿನಗಳಲ್ಲಿ ಪ್ರಕೃತಿಯಲ್ಲಿ ಸಿಗುವ ಸೋಪ್ಪುಗಳನ್ನೇ ಪದಾರ್ಥವಾಗಿ ಉಪಯೋಗಿಸುತ್ತಿದ್ದೆವು ಆ ದಿನಗಳ ನೆನಪನ್ನು ಇಂದಿನ ದಿನಗಳಲ್ಲಿ ಆಟಿ ಆಚರಣೆಯ ಮೂಲಕ ನಡೆಸುವುದು ಅಭಿನಂದನೀಯ ಎಂದು ಅತ್ತಾವರ ಸರಕಾರಿ ಪ್ರೌಢಶಾಲೆಯ ಉಪನ್ಯಾಸಕಿ ವೀಣಾ ಗಣೇಶ್ ಹೇಳಿದರು ಅವರು ಕಿನ್ನಿಗೋಳಿಯ ಸರಫ್ ಅಣ್ಣಯ್ಯಚಾರ್ ಸಭಾಭವನದಲ್ಲಿ ಕಾಳಿಕಾಂಭ ಮಹಿಳಾ ವೃಂದದ ವತಿಯಿಂದ ನಡೆದ ಆಟಿ ಆಚರಣೆಯ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ಆಟಿಯಲ್ಲಿ ವಿಶೇಷ ತಿನಸಿನೊಂದಿಗೆ ಅನೇಕ ಆಚರಣೆಗಳು ಇದ್ದು ಇದು ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಕೊಡಬಹುದಾಗಿದೆ ಎಂದರು. ಈ ಸಂದರ್ಭ ನಾಟಿ ವೈದ್ಯೆ ರಮಣಿ ಸದಾಶಿವ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಮಮತಾ ಸುರೇಂದ್ರ ಅತಿಥಿಗಳನ್ನು ಪರಿಚಯಿಸಿದರು, ಅರವಿಂದ ಆಚಾರ್ಯ ಆಟಿ ತಿನಸುಗಳ ಪಟ್ಟಿ ವಾಚಿಸಿದರು. ಕಾರ್ಯಕ್ರಮದಲ್ಲಿ ಕಾಳಿಕಾಂಭ ಮಹಿಳಾ ವೃಂದದ ಅಧ್ಯಕ್ಷೆ ಶಶಿಕಲಾ ಯೋಗೀಶ್ ಅಧ್ಯಕ್ಷತೆ ವಹಿಸಿದರು. ವಿಶ್ವ ಭ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಸ್ ಯೋಗೀಶ್ ಆಚಾರ್ಯ ಮಾರಡ್ಕ, ಸಭಾ ಭವನ ಸಮಿತಿಯ ಅಧ್ಯಕ್ಷ ಎಂ ಪ್ರಥ್ವಿರಾಜ್ ಆಚಾರ್ಯ ಮತ್ತಿತರರೌ ಉಪಸ್ಥಿತರಿದ್ದರು.
ಪ್ರತಿಮಾ ಪ್ರಕಾಶ್ ನಿರೂಪಿಸಿ, ಶಶಿಕಲಾ ಯೋಗೀಶ್ ಸ್ವಾಗತಿಸಿ, ವಾಣಿ ಗಣೇಶ್ ಧನ್ಯವಾದ ಸಮರ್ಪಿಸಿದರು.



