ಅಂಡಿಂಜೆ ಕಿಲಾರ ಮಾರಿಕಾಂಬಾ ದೇವಸ್ಥಾನದ ಬಳಿ ಬೈಕ್ ಗಳ ನಡುವೆ ಅಪಘಾತ ನಡೆದಿದೆ. ಪರಿಣಾಮ ಮಂಗಳಾದೇವಿ ಮೇಳದ ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ಜೀವ ಕಳೆದುಕೊಂಡಿದ್ದಾರೆ.

ಅಂಡಿಂಜೆ ಗ್ರಾಮದ ನಿವಾಸಿ ಸತೀಶ್ ಆಚಾರ್ಯ ಸುಳ್ಯದಲ್ಲಿ ಆದಿತ್ಯವಾರ ನಡೆದ ಯಕ್ಷಗಾನ ಮುಗಿಸಿ ಮನೆಗೆ ಹಿಂತಿರುಗುವ ಸಮಯ ಸೋಮವಾರ ಬೆಳಗಿನ ಜಾವ ಅಪಘಾತ ನಡೆದಿದೆ. ಸತೀಶ್ ಸ್ಥಳದಲ್ಲೇ ಮೃತರಾಗಿದ್ದಾರೆ.
ಮೃತರು ತಾಯಿ, ಸಹೋದರಿ ಮತ್ತು ಸಹೋದರನನ್ನು ಅಗಲಿದ್ದಾರೆ.



