ಜನ ಮನದ ನಾಡಿ ಮಿಡಿತ

Advertisement

ಬೆಂಗಳೂರು : ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆ : ಕೆರೋಸೀನ್ ಎಂಜಿನ್ ಅಭಿವೃದ್ಧಿಯಲ್ಲಿ ಯಶಸ್ವಿ

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮಹತ್ವದ ಸಾಧನೆಯೊಂದನ್ನು ಮಾಡಿದೆ. ಉಡಾವಣಾ ವಾಹನವಾದ ಮಾರ್ಕ್-3 ರ ಬೂಸ್ಟರ್ ಹಂತಕ್ಕೆ ಶಕ್ತಿ ತುಂಬಲು ದ್ರವರೂಪದ ಆಮ್ಲಜನಕ ಅಥವಾ ಕೆರೋಸೀನ್ ಬಳಸುವ ಸೆಮಿ-ಕ್ರಯೋಜೆನಿಕ್ ಎಂಜಿನನ್ನು ಅಭಿವೃದ್ಧಿಪಡಿಸುವಲ್ಲಿ ಇಸ್ರೋ ಯಶಸ್ವಿಯಾಗಿದೆ.

ಇದರ ಪರೀಕ್ಷೆಯನ್ನು ಶುಕ್ರವಾರ ನಡೆಸಲಾಗಿದ್ದು, ಈ ವೇಳೆ 2.5 ಸೆಕೆಂಡುಗಳ ಕಾಲ ಸುಗಮ ದಹನ ಮತ್ತು ಬೂಸ್ಟ್‌ಸ್ಟ್ರಾಪ್ ಮೋಡ್ ಕಾರ್ಯಾಚರಣೆಯನ್ನು ಎಂಜಿನ್‌ ಪ್ರದರ್ಶಿಸಿರುವುದಾಗಿ ಇಸ್ರೋ ತಿಳಿಸಿದೆ.

ಈ ಮೂಲಕ ಪ್ರೀ-ಬರ್ನರ್‌, ಟರ್ಬೋ ಪಂಪ್‌, ಆರಂಭಿಕ ವ್ಯವಸ್ಥೆ ಮತ್ತು ನಿಯಂತ್ರಣ ಉಪಕರಣಗಳಂತಹ ನಿರ್ಣಾಯಕ ಉಪವ್ಯವಸ್ಥೆಯ ಸಮಗ್ರ ಕಾರ್ಯಕ್ಷಮತೆಯನ್ನು ಪರೀಕ್ಷಿಸಲಾಗಿದೆ. ಈ ಸಂಬಂಧ ಇನ್ನೂ ಅನೇಕ ಪರೀಕ್ಷೆಗಳು ನಡೆಯಲಿವೆ.

2 ಸಾವಿರ ಕಿಲೋನ್ಯೂಟನ್‌ನಷ್ಟು ಥ್ರಸ್ಟ್‌ ನೀಡುವ ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅನ್ನು ಭವಿಷ್ಯದ ಉಡಾವಣಾ ವಾಹನಗಳ ಪೇಲೋಡ್‌ಗಳನ್ನು ಉತ್ತಮಗೊಳಿಸಲು ಮತ್ತು ಬೂಸ್ಟರ್ ಹಂತಗಳಿಗೆ ಶಕ್ತಿ ತುಂಬಲು ಬಳಸಲಾಗುತ್ತದೆ. ಇದರಿಂದ ಪೇಲೋಡ್‌ನ ಸಾಮರ್ಥ್ಯ 4 ಟನ್‌ನಿಂದ 5 ಟನ್‌ಗೆ ಹೆಚ್ಚಳವಾಗಲಿದೆ.

ಸೆಮಿ-ಕ್ರಯೋಜೆನಿಕ್ ಎಂಜಿನ್‌ ಅನ್ನು ಮೊದಲ ಬಾರಿ ಮಾ.28ರಂದು ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!