ಪ್ರಯಾಗ್ ರಾಜ್ ಮಹಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಮೊನಾಲಿಸಾ ಅವರನ್ನು ನಾಯಕಿಯಾಗಿಸಿ ಚಿತ್ರ ಮಾಡುವುದಾಗಿ ಘೋಷಿಸಿದ್ದ ಚಲನಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಬಂಧಿಸಲಾಗಿದೆ.

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸನೋಜ್ ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮೊನಾಲಿಸಾ ಕುಂಭ ಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದಾಗ ಸಾಮಾಜಿಕ ಮಾಧ್ಯಮಗಳ ಕಣ್ಣಿಗೆ ಬಿದ್ದು ರಾತ್ರಿ ಬೆಳಗಾಗುವುದರೊಳಗೆ ಪ್ರಖ್ಯಾತಿ ಗಳಿಸಿದ್ದರು.ಅವರ ವಿಶಿಷ್ಟ ಕಣ್ಣುಗಳು ಅವರಿಗೆ ವಿಶಿಷ್ಟ ಸೌಂದರ್ಯವನ್ನು ತಂದಿದ್ದವು.

ಮೊನಾಲೀಸಾ ಅವರನ್ನು ನಾಯಕಿಯಾಗಿಸಿ ಚಲನಚಿತ್ರ ಮಾಡುವ ಬಯಕೆಯನ್ನು ಸನೋಜ್ ವ್ಯಕ್ತಪಡಿಸಿದ್ದರು.ಈಗ ಸನೋಜ್ ಬಂಧನವಾಗುವುದರೊಂದಿಗೆ ಮೊನಾಲಿಸಾ ಚಿತ್ರರಂಗ ಪ್ರವೇಶದ ಮೇಲೆ ಕರಿನೆರಳು ಬಿದ್ದಂತಾಗಿದೆ. ಝಾನ್ಸಿ ಮೂಲದ ಯುವತಿ ನೀಡಿದ ದೂರಿನನ್ವಯ ಸನೋಜ್ ಮಿಶ್ರಾ ಬಂಧಿತರಾಗಿದ್ದಾರೆ.



