ರೈಲು ಡಿಕ್ಕಿ ಹೊಡೆದು ಹಸುಗಳ ಗುಂಪು ಸಾವನ್ನಪ್ಪಿರುವ ಘಟನೆ ಪಾಲಕ್ಕಾಡ್ ನಲ್ಲಿ ನಡೆದಿದೆ. ಹಸುಗಳು ರೈಲು ಹಳಿ ದಾಟುವಾಗ ಈ ಅಪಘಾತ ಸಂಭವಿಸಿದೆ. ರೈಲು ಡಿಕ್ಕಿ ಹೊಡೆದು 17 ಹಸುಗಳು ಸಾವನ್ನಪ್ಪಿವೆ.

ಪಾಲಕ್ಕಾಡ್‌ನ ಮೀನ್ಕರೆ ಬಳಿ ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ. ಹಳಿ ದಾಟುತ್ತಿದ್ದಾಗ ಆ ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದ ಹಸುಗಳಿಗೆ ರೈಲು ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ದೇಹದ ಭಾಗಗಳು ನಜ್ಜುಗುಜ್ಜಾಗಿರುವುದು ಕಂಡುಬಂದಿದೆ.



