ಕಾಪು ವಿಧಾನಸಭಾ ಕ್ಷೇತ್ರದ ಕಾಪು ಪುರಸಭಾ ವ್ಯಾಪ್ತಿಯ ಅಲ್ಪಸಂಖ್ಯಾತ ಕಾಲನಿಗಳ ರಸ್ತೆ ಅಭಿವೃದ್ಧಿಗೆ 90 ಲಕ್ಷ ರೂಪಾಯಿ ಅನುದಾನ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಇಂದು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಕಾಪು ಪುರಸಭೆಯ ಜನಾರ್ಧನ ವಾರ್ಡಿನ ವೈಟ್ & ವೈಟ್ ಬಸ್ ನಿಲ್ದಾಣದಿಂದ ಸಂಶುಧ್ಧಿನ್ ಮನೆ ವರೆಗೆ ರಸ್ತೆ ಅಭಿವೃದ್ಧಿ – 10 ಲಕ್ಷ, ಮಲ್ಲಾರು ಗರಡಿ ವಾರ್ಡಿನ ಕುಡ್ತಿಮಾರ್ ರಸ್ತೆ ಅಭಿವೃದ್ಧಿ – 15 ಲಕ್ಷ, ಮಲ್ಲಾರು ರೈಲ್ವೆ ಬ್ರಿಡ್ಜ್ ನಿಂದ ಎಸ್.ಎಸ್ ಲೇಔಟ್ ರಸ್ತೆ ಕಾಂಕ್ರೀಟಿಕರಣ – 5 ಲಕ್ಷ, ಭಾರತ್ ನಗರ ವಾರ್ಡಿನ ಕಾಲೋನಿಗಳಲ್ಲಿ ಚರಂಡಿ ಸಹಿತ ರಸ್ತೆ ಅಭಿವೃದ್ಧಿ – 40 ಲಕ್ಷ, ದಂಡತೀರ್ಥ ವಾರ್ಡಿನ ರಸ್ತೆ ಸಹಿತ ಚರಂಡಿ ಅಭಿವೃದ್ಧಿ – 20 ಲಕ್ಷ ಸೇರಿದಂತೆ ಒಟ್ಟು 90 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಾಪು ಪುರಸಭೆಯ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್, ಪುರಸಭೆಯ ಸದಸ್ಯರಾದ ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ಅರುಣ್ ಶೆಟ್ಟಿ ಪಾದೂರು, ಸುರೇಶ್ ದೇವಾಡಿಗ, ಲತಾ ವಿಶ್ವನಾಥ್, ರತ್ನಾಕರ್ ಶೆಟ್ಟಿ ಹಾಗೂ ಗುತ್ತಿಗೆದಾರರು, ಸ್ಥಳೀಯರು ಉಪಸ್ಥಿತರಿದ್ದರು.







