ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವಾ ದಿನಾಚರಣೆ ಸಪ್ತಾಹದ ಅಂಗವಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಡುಪಿ ಠಾಣೆಯ ವತಿಯಿಂದ ನಗರದ ಪತ್ರಿಕಾಭವನದ ಪರಿಸರದಲ್ಲಿ ಅಗ್ನಿನಂದಿಸುವ ಪ್ರಾತ್ಯಕ್ಷಿಕೆ ನಡೆಯಿತು.

ಅಗ್ನಿ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಅಗ್ನಿಶಾಮಕ ಉಪಕರಣಗಳನ್ನು ಹೇಗೆ ಬಳಸಬೇಕು ಎಂಬುದರ ಕುರಿತು ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾಹಿತಿ ನೀಡಿದರು. ಜಲವಾಹನವನ್ನು ಬಳಸಿ ಬೆಂಕಿ ನಂದಿಸುವ ಪ್ರಾತ್ಯಕ್ಷಿಕೆಯನ್ನೂ ತೋರಿಸಲಾಯಿತು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಉಡುಪಿ ಠಾಣೆಯ ಸಹಾಯಕ ಠಾಣಾಧಿಕಾರಿ ರವೀಂದ್ರ, ಪ್ರಮುಖ ಅಗ್ನಿಶಾಮಕ ಸಿಬ್ಬಂದಿ ರಾಘವೇಂದ್ರ ಆಚಾರಿ, ಎಂ.ಕೇಶವ, ವಿನಾಯಕ ಬನ್ನಿಶೆಟ್ಟಿ, ಅಮರ್ ಕಟ್ಟಿ, ಶಹಬಾಜ್ ಖಾನ್, ಚಾಲಕ ಭರತ್ ಉಪಸ್ಥಿತರಿದ್ದರು.
 
								
 
															


