ಕೌಟುಂಬಿಕ ಜಗಳದಿಂದ ಬೇಸತ್ತು ತಾಯಿ ಮತ್ತು ಇಬ್ಬರು ಮಕ್ಕಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟದ ಕಾಡು ಹೊಲದಲ್ಲಿ ನಡೆದಿದೆ. ಮಹದೇಶ್ವರ ಬೆಟ್ಟ ಸಮೀಪದ ಕಾಡುಹೊಲದ ಸುಶೀಲ (30) ಚಂದ್ರು, (8) ದಿವ್ಯಾ (11) ಮೃತರು.

ಸೋಮವಾರ ಜಮೀನಿನ ಬಾವಿಯಲ್ಲಿ ನೀರನ್ನು ತರಲು ತೆರಳಿದಂತಹ ಮಾಲೀಕನಿಗೆ ಬಾವಿಯ ಬಳಿ ಚಪ್ಪಲಿ, ತಾಳಿ ಹಾಗೂ ಇನ್ನಿತರ ವಸ್ತು ಕಂಡುಬಂದಿದ್ದು, ಗ್ರಾಮಸ್ಥರು ಮತ್ತು ಪೊಲೀಸರನ್ನು ಕರೆಸಿ ಪರಿಶೀಲಿಸಿದಾಗ ಮೃತದೇಹ ಕಂಡುಬಂದಿದೆ.



