ಜೀವ, ಜೀವನ ನೀರಿನ ಮೇಲಿನ ಗುಳ್ಳೆಯಂತೆ. ಯಾವಾಗ ಯಾರಿಗೇ ಎಲ್ಲಿ ಏನಾಗತ್ತೆ ಅಂತ ಹೇಳೋಕೆ ಸಾಧ್ಯವೇ ಇಲ್ಲ. ಇಂದು ಇದ್ದವರ ಕಥೆ ನಾಳೆ ಏನೋ ಎಂದು ಬಲ್ಲವರಿಲ್ಲ. ವಿಧಿಯಾಟದ ಮುಂದೆ ಮಾನವಕುಲ ತೃಣಕ್ಕೆ ಸಮಾನ. ಅಂತಹ ವಿಧಿಯ ಕ್ರೂರತ್ವಕ್ಕೆ ಸಾಲೆತ್ತೂರು ಗ್ರಾಮದ ಕಾರಾಜೆ ನಿವಾಸಿ ರಮೇಶ್ ಶೆಟ್ಟಿ ಚಿರನಿದ್ರೆಗೆ ಜಾರಿದ್ದಾರೆ.

ಇನ್ನು ಈ ವ್ಯಕ್ತಿಯ ಮುಗ್ದ ನಗು, ಉತ್ಸಾಹ, ಓಡಾಟವೆಲ್ಲ ಮರಿಚಿಕೆಯಷ್ಟೇ. ಊರಿನಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡ ರಮೇಶ್ ಶೆಟ್ಟಿ ಕಾರಾಜೆ ಕಳೆದ ಒಂದು ವರ್ಷದಿಂದ ಕ್ಯಾನ್ಸರ್ ಎಂಬ ಮಾರಕ ಕಾಯಿಲೆಯಿಂದ ಬಳಲುತ್ತಿದ್ರು. ಅದೆಷ್ಟೋ ಆಸ್ಪತ್ರೆಗಳನ್ನ ಸುತ್ತಿದ್ರೂ, ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸೇರಿದಂತೆ ಅನೇಕರು
ಲಕ್ಷಲಕ್ಷ ಹಣ ಕೊಟ್ಟು ಧನ ಸಹಾಯ ಮಾಡಿದ್ರೂ ಕೊನೆಗೂ ಪ್ರಯತ್ನ ಫಲಿಸಲೇ ಇಲ್ಲ. ಉತ್ಸಾಹದ ಚಿಲುಮೆಯಾಗಿದ್ದ ರಮೇಶ್ ಅವರು ಪತ್ನಿ ಹಾಗೂ ಪುತ್ರಿಯನ್ನು ಆಗಲಿ, ಪರಲೋಕಗ್ರಸ್ಥರಾಗಿದ್ದಾರೆ. ನೋಡಲು ಸಣಕಲರಂತಿರುವ ಈ ವ್ಯಕ್ತಿ ಮೈದಾನಕ್ಕಿಳಿದರೆ ಅಕ್ಷರಶಃ ಎದುರಾಳಿ ಎದೆಯಲ್ಲಿ ಸೋಲಿನ ಭಯ ಸದ್ದು ಮಾಡತ್ತೆ. ತನ್ನ ಯುವಪ್ರಾಯದಲ್ಲಿ ವಾಲಿಬಾಲ್, ಖೋಖೋ, ಕಬಡ್ಡಿ ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ತನ್ನ ಛಾಪುವನ್ನ ಮೂಡಿಸಿದವರು ಈ ರಮೇಶ್ ಶೆಟ್ಟಿ ಕಾರಾಜೆ. ಅದಲ್ಲದೇ ಕ್ರೀಡೆಗೆ ಹೆಚ್ಚಿನ ಒತ್ತನ್ನು ನೀಡಿ ಯುವಕರಿಗಾಗಿ ಕ್ರೀಡೆಯನ್ನು ಆಯೋಜನೆ ಮಾಡುತ್ತಿದ್ರು. ಇನ್ನು ನಮ್ಮ ಅಭಿಮತ ಟಿವಿಯ 6ರ ಸಂಭ್ರಮ ಸಾಲೆತ್ತೂರಿನಲ್ಲಿ ಮೇಳೈಸಿದ ಸಂದರ್ಭ ಇಡೀ ಕಾರ್ಯಕ್ರಮದ ಸಾರಥ್ಯವನ್ನ ವಹಿಸಿಕೊಂಡು, ಅಚ್ಚುಕಟ್ಟಾಗಿ ವ್ಯವಸ್ಥೆಗಳನ್ನು ಮಾಡಿಕೊಟ್ಟ ನಾಯಕ. ಇವರ ಅವಿರತ ಪರಿಶ್ರಮಕ್ಕೆ ಅಂದು ಅಭಿಮತ ಟಿವಿ ಇವರನ್ನು ಸನ್ಮಾನಿಸಿ ಗೌರವಿಸಿತ್ತು. ಬಂಟರ ಸಂಘಗಳಲ್ಲಿ ಸಕ್ರಿಯರಾಗಿದ್ದ ಇವರು ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ರು. ಸಾಲೆತ್ತೂರಿನಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆಗೆ ಸಂಬAಧಿಸಿದAತೆ ಹಲವಾರು ಸಮಾರಂಭಗಳು ನಡೆದಾಗಲೂ ಎಲ್ಲದರ ಮುಂದಾಳು ಈ ರಮೇಶ್ ಶೆಟ್ಟಿ. ಅಷ್ಟರ ಮಟ್ಟಿಗೆ ಎಲ್ಲರಿಗೂ ಚಿರಪರಿಚಿತರಾಗಿದ್ರು. ಕ್ರೀಡೆಯಲ್ಲಿ ಆಸಕ್ತಿ ಇರುವ ಯುವಕರಿಗೆ ಪ್ರೋತ್ಸಾಹಿಸುತ್ತಿದ್ದು, ಅವರಿಗಾಗಿ ಹಲವಾರು ಕ್ರೀಡೆಗಳು ಇವರ ಪ್ರಾಯೋಜಕತ್ವದಲ್ಲಿ ಆಯೋಜನೆಗೊಳ್ಳುತ್ತಿತ್ತು. ಅಷ್ಟೇ ಮಾತ್ರವಲ್ಲದೇ ಈ ಅಜಾತಶತ್ರು ದೇವಸ್ಥಾನ, ಸಂಘ, ಸಂಸ್ಥೆ, ಸಮಿತಿ, ಟ್ರಸ್ಟ್ಗಳಲ್ಲಿ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಅನೇಕ ಹುದ್ದೆಗಳನ್ನ ಸಲಿಸಾಗಿ ನಿಭಾಯಿಸುತ್ತಿದ್ರು. ಬಂಟರ ಸಂಘಗಳಲ್ಲಿ ಸಕ್ರೀಯವಾಗಿ ತನ್ನನ್ನ ತಾನು ತೊಡಗಿಸಿಕೊಂಡಿದ್ದಾರೆ. ಇಂದು ಈ ಅಜಾತಶತ್ರುವಿನ ಆಗಲಿಕೆಗೆ ಇಡೀ ಊರಿಗೆ ಊರೇ ವಿಧಿಯಾಟವನ್ನು ಬಲ್ಲವರಾರು ಎನ್ನುತ್ತಾ ಮೂಕವಿಸ್ಮಿತರಾಗಿ, ಕಣ್ಣೀರು ಹಾಕಿದೆ. ಅಪ್ಪನೇ ಆಕಾಶವೆನ್ನುತ್ತಿದ್ದ ಆ ಹೆಣ್ಣು ಮಗಳು ಬಿಕ್ಕಿ ಬಿಕ್ಕಿ ಆಳುತ್ತಿದೆ. ಕೈ ಹಿಡಿದು ಜೀವನ ಪೂರ್ತಿ ಇರುವ ಭರವಸೆ ಕೊಟ್ಟ ಪತಿಯನ್ನು ಕಳೆದುಕೊಂಡ ಪತ್ನಿಯ ಆಳಲು ಮುಗಿಲುಮುಟ್ಟಿದೆ. ಬರಸಿಡಿಲಿನಂತೆ ಅಪ್ಪಳಿಸಿದ ರಮೇಶ್ ಶೆಟ್ಟಿ ಕಾರಾಜೆ ಆಗಲಿಕೆ ಎಲ್ಲರನ್ನು ಅಕ್ಷರಶಃ ದುರ್ಖತಪ್ತರಾನ್ನಾಗಿಸಿದೆ.



