ನಿಮ್ಮ ಭವಿಷ್ಯವನ್ನು ಅನಾವರಣ ಮಾಡಿಕೊಳ್ಳಿ ಎಂದು ಘೋಷ ವಾಕ್ಯದೊಂದಿಗೆ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ಒದಗಿಸುತ್ತಿರುವ ಕೋರ್ಸ್ ಗಳ ವಿವರವನ್ನು ಬಿಡುಗಡೆ ಮಾಡಿದೆ. ಅತ್ಯುತ್ತಮ ಬೋಧಕ ವರ್ಗ, ಅತ್ಯಾಧುನಿಕ ಸೌಲಭ್ಯಗಳ ಕ್ಯಾಂಪಸ್ ಮತ್ತು ನ್ಯಾಕ್ ಎ-ಪ್ಲಸ್ ಮಾನ್ಯತೆಯನ್ನು ಹೊಂದಿರುವ ಯೆನೆಪೊಯಾ ಪರಿಗಣಿತ ವಿಶ್ವವಿದ್ಯಾಲಯ 2024ರಲ್ಲಿ ಎನ್.ಐ.ಆರ್.ಎಫ್. ನ ಭಾರತದ ಅಗ್ರ ಪರಿಗಣಿತ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 95 ನೇ ಸ್ಥಾನ ಪಡೆದಿದೆ.

ಯೆನೆಪೊಯಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿದೆ. ಆಧುನಿಕ ಪ್ರಯೋಗಾಲಯ, ಗ್ರಂಥಾಲಯ, ಸಿಮ್ಯುಲೇಶನ್ ಸೌಲಭ್ಯದೊಂದಿಗೆ ಅತ್ಯುತ್ತಮ ಕಲಿಕಾ ಪರಿಸರವನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 1000 ಹಾಸಿಗೆಗಳ ಬೋಧಕ ಆಸ್ಪತ್ರೆ ಸೌಲಭ್ಯವನ್ನು ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ವ್ಯವಸ್ಥೆಯೊಂದಿಗೆ ಹೊಂದಿದೆ.ಯೆನೆಪೊಯಾ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಎನ್.ಐ.ಆರ್.ಎಫ್. 2024ರಲ್ಲಿ 26ನೇ ಸ್ಥಾನ ಪಡೆದಿದೆ. ಕ್ಲಿನಿಕಲ್ ತರಬೇತಿ ಜೊತೆ ಭವಿಷ್ಯದ ದಂತ ವೈದ್ಯ ವೃತ್ತಿಪರರನ್ನು ಅದು ರೂಪಿಸುತ್ತಿದೆ.

ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸುರಕ್ಷೆಗೆ ಗರಿಷ್ಟ ಆದ್ಯತೆಯನ್ನು ನೀಡುತ್ತದೆ. 2008ರಲ್ಲಿ ಯು.ಜಿ.ಸಿ.ಯಿಂದ ಪರಿಗಣಿತ ವಿಶ್ವವಿದ್ಯಾಲಯ ಸ್ಥಾನ ಮಾನವನ್ನು ಪಡೆದ ಬಳಿಕ ಶೈಕ್ಷಣಿಕ ಉತ್ಕೃಷ್ಟತೆಗೆ ಆದ್ಯ ಗಮನ ನೀಡಿರುವ ವಿಶ್ವವಿದ್ಯಾಲಯ ವೈದ್ಯ ವಿಜ್ಞಾನ, ದಂತ ವಿಜ್ಞಾನ, ನರ್ಸಿಂಗ್ ಮತ್ತು ಅರಎ ವೈದ್ಯಕೀಯ ವಿಜ್ಞಾನ, ಮಾನವಿಕಗಳು ಮತ್ತು ಸಾಮಾಜಿಕ ವಿಜ್ಞಾನಗಳು, ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ, ಉದ್ಯಮಾಡಳಿತ, ಆತಿಥ್ಯ ಕ್ಷೇತ್ರಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.
ಪ್ರತಿಭಾವಂತರಿಗೆ ವಿಶ್ವವಿದ್ಯಾಲಯವು ವಿದ್ಯಾರ್ಥಿ ವೇತನಗಳನ್ನು ನೀಡಿ ಪ್ರೋತ್ಸಾಹಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.



