ಕಾಶ್ಮೀರದ ಶ್ರೀನಗರದಿಂದ 174 ಕನ್ನಡಿಗರನ್ನು ಹೊತ್ತ ವಿಶೇಷ ವಿಮಾನವು ಮಧ್ಯಾಹ್ನ 1.30ರ ವೇಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದ ಮತ್ತು ಹಿರಿಯ ಪೊಲೀಸ್ ಅಧಿಕಾರಿ ಆರ್.ಚೇತನ್ ಅವರಿದ್ದ ರಾಜ್ಯ ತಂಡವು, ಕರ್ನಾಟಕದ 174 ಪ್ರವಾಸಿಗರನ್ನು ಕರೆತರಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿತ್ತು.
ಪ್ರವಾಸಿಗರ ಜತೆಯಲ್ಲಿ ಸಚಿವ ಸಂತೋಷ್ ಲಾಡ್ ಮತ್ತು ರಾಜ್ಯದ ಅಧಿಕಾರಿಗಳ ತಂಡವೂ ಅದೇ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿಸಿದೆ.
‘ಈ ತೆರವು ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ದಾಳಿಯನ್ನು ಕಣ್ಣಾರೆ ಕಂಡ ಕುಟುಂಬದವರ ಸ್ಥಿತಿ ಭೀಕರವಾಗಿತ್ತು. ಆ ಭಯದಿಂದ ಹೊರಗೆ ಬರಲು ಇನ್ನಷ್ಟು ದಿನಗಳಾಗಬಹುದು’ ಎಂದು ಸಂತೋಷ್ ಲಾಡ್ ಹೇಳಿದರು.



