ಈ ಯುವಕನ ಹೆಸರು ಕಾರ್ತಿಕ್ ಅಂತ. ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯ ನಿವಾಸಿ. ಇವನಿಗೆ ಇನ್ನೂ 21 ವರ್ಷ ವಯಸ್ಸು. ಕಾರ್ತಿಕ್‌ಗೆ ಮದುವೆಯಾಗಿ ಒಂದು ವರ್ಷ ಆಗಿತ್ತು. ಕಳೆದ 8 ದಿನಗಳ ಹಿಂದಷ್ಟೇ ಕಾರ್ತಿಕ್ ಪತ್ನಿ ಮಗುವಿಗೆ ಜನ್ಮ ನೀಡಿದ್ದರು.

ಕಾರ್ತಿಕ್ ಸ್ನೇಹಿತರು ಮದ್ಯ ಸೇವನೆಗೆ ಬೆಟ್ಟಿಂಗ್ ಕಟ್ಟಿದ್ದಾರೆ. ನೀರು ಬೆರಸದೆ ಮದ್ಯ ಸೇವನೆ ಮಾಡಿದ್ರೆ 10 ರೂಪಾಯಿ ಕೊಡುವ ಸವಾಲು ಹಾಕಿದ್ದಾರೆ. ದುಡ್ಡಿನ ಆಸೆಗೆ ಚಾಲೆಂಜ್ ಒಪ್ಪಿಕೊಂಡ ಕಾರ್ತಿಕ್, 5 ಬಾಟಲಿ ಮದ್ಯವನ್ನು ನೀರು ಬೆರಸದೆ ಕುಡಿದಿದ್ದಾನೆ.
ನೀರು ಬೆರಸದೇ 5 ಬಾಟಲ್ ಕುಡಿದ ಮೇಲೆ ಕಾರ್ತಿಕ್ ತೀವ್ರ ಅಸ್ವಸ್ಥನಾಗಿದ್ದಾನೆ. ಸ್ನೇಹಿತರು ಈತನನ್ನು ಮುಳಬಾಗಿಲು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ. 10 ಸಾವಿರ ರೂಪಾಯಿ ಆಸೆಗೆ ಎಣ್ಣೆ ಕುಡಿದ ಕಾರ್ತಿಕ್ ಕೊನೆಗೆ ಉಸಿರೇ ಬಿಟ್ಟಿದ್ದಾನೆ.
ಕಾರ್ತಿಕ್ ಜೊತೆಗಿದ್ದ ವೆಂಕಟರೆಡ್ಡಿ, ಸುಬ್ರಮಣಿ ಮತ್ತು ಇತರೆ ಮೂವರು ಬೆಟ್ ಕಟ್ಟಿದ್ದಾರೆ. ವೆಂಕಟರೆಡ್ಡಿ 5 ಬಾಟಲ್ ಮದ್ಯ ಸೇವಿಸಿದರೆ 10 ಸಾವಿರ ರೂಪಾಯಿ ಕೊಡುವುದಾಗಿ ಹೇಳಿದ್ದರಂತೆ. ನಂಗಲಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿದ್ದು, ವೆಂಕಟರೆಡ್ಡಿ, ಸುಬ್ರಮಣಿ ಅನ್ನು ಬಂಧಿಸಿ, ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.



