ಬಿಜೆಪಿಯ 18 ಶಾಸಕರ ಅಮಾನತು ವಿಚಾರಕ್ಕೆ ಸಂಬoಧಪಟ್ಟoತೆ ಸ್ಪೀಕರ್ ಯು.ಟಿ ಖಾದರ್ ವಿರುದ್ಧ ಶಾಸಕ ಹರೀಶ್ ಪುಂಜಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದೀಗ ಹರೀಶ್ ಪೂಂಜಾ ವಿರುದ್ದ ಹಕ್ಕುಚ್ಯುತಿಗೆ ಕಾಂಗ್ರೆಸ್ ಶಾಸಕರು ದೂರು ನೀಡಿದ್ದಾರೆ.

ಈ ಬಗ್ಗೆ ಮಂಗಳೂರಿನಲ್ಲಿ ಸ್ಪೀಕರ್ ಯು.ಟಿ ಖಾದರ್ ಪ್ರತಿಕ್ರಿಯೆ ನೀಡಿದ್ದು, ಕೆಲವು ಶಾಸಕರಿಗೆ ಏನಾದರೂ ಮಾತನಾಡಬೇಕೆಂಬ ಚಾಲಿ ಶುರುವಾಗಿದೆ. ಮಾರ್ಕೆಟ್‌ನಲ್ಲಿ ಟಿ.ಆರ್.ಪಿ ಸಿಗ್ತದೆ ಎಂದು ಮಾತನಾಡ್ತಾರೆ. ಸಂವಿಧಾನಕ್ಕೆ ಸರಿಯಾಗಿ ಮಾತನಾಡಬೇಕು ಹಾಗೂ ಇರಬೇಕು. ಕೆಲವೊಮ್ಮೆ ಹೆಚ್ಚು ಕಮ್ಮಿ ಆಗುತ್ತೆ. ಆದರೆ ಅದೇ ಚಾಲಿಯಾಗಬಾರದು ಎಂದು ಆಕ್ರೋಶಿತರಾಗಿದ್ದಾರೆ.



