ಕಾಶ್ಮೀರದಲ್ಲಿ ಧರ್ಮ ಕೇಳಿ ಗುಂಡು ಹೊಡೆದಿದ್ದಾರೆ. ಭಯೋತ್ಪಾದನೆ ಬಗ್ಗೆ ಗೊತ್ತಿದ್ದೂ ಸಿಎಂ ಯುದ್ಧ ಬೇಡ ಅಂತಾರೆ. ಮುಖ್ಯಮಂತ್ರಿಯಾಗಿ ಈ ಹೇಳಿಕೆ ದುರಾದೃಷ್ಟಕರ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಇವರು ಉಡುಪಿಯಲ್ಲಿ ಮಾತನಾಡಿ, ದೇಶಕ್ಕೆ ಗಂಡಾoತರ ಬಂದಾಗ ಹೀಗೆಲ್ಲ ಮಾತನಾಡಬೇಡಿ. ಚುನಾವಣೆ, ಅಧಿಕಾರ ಬರುತ್ತೆ ಹೋಗುತ್ತೆ ನಿಮ್ಮ ವಯಸ್ಸಿನ ಬಗ್ಗೆ ಗೌರವ ಇದೆ. ಇಂದಿರಾಗಾoಧಿ ಪ್ರಧಾನಿಯಾಗಿ ಯುದ್ಧಕ್ಕೆ ಹೋದಾಗ ಆರ್ ಎಸ್ ಎಸ್, ವಾಜಪೇಯಿ ಜನಸಂಘ ಎಲ್ಲರೂ ಬೆಂಬಲಿಸಿದ್ದರು. ರಾಜಕೀಯ ಬೇರೆ.. ದೇಶ ಬೇರೆ ಇದನ್ನು ಮೊದಲು ಅರಿತುಕೊಳ್ಳಿ ಎಂದಿದ್ದಾರೆ.



