ಜನ ಮನದ ನಾಡಿ ಮಿಡಿತ

Advertisement

ಮಂಗಳೂರು : ಮಂಗಳೂರಿಗರಿಗೆ ಸದ್ಯಕ್ಕಿಲ್ಲ ನೀರಿನ ಕೊರತೆ

ಕರಾವಳಿಯಲ್ಲಿ ಈ ಬಾರಿ ತಾಪಮಾನ ಹಿಂದೆಂದಿಗಿಂತಲೂ ಅಧಿಕವಾಗಿದೆ. ಈ ಬಿರುಬೇಸಿಗೆಯಲ್ಲಿಯೂ ಮಂಗಳೂರು ನಗರದಲ್ಲಿ ಕುಡಿಯುವ ನೀರಿಗಿಲ್ಲ ಆತಂಕ ಎಂಬುದು ನೆಮ್ಮದಿಗೆ ಕಾರಣವಾಗಿದೆ.

ಸಾಧಾರಣವಾಗಿ ಮಂಗಳೂರು ನಗರಕ್ಕೆ ಏಪ್ರಿಲ್-ಮೇ ತಿಂಗಳಲ್ಲಿ ಕುಡಿಯವ ನೀರಿಗೆ ಬರ ಉಂಟಾಗುತ್ತದೆ. ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ರೇಶನಿಂಗ್ ಮಾಡುವ ಪ್ರಮೇಯ ಉಂಟಾಗುತ್ತದೆ.‌ ದಿನಬಿಟ್ಟು ದಿನ, ಎರಡು ದಿನಕ್ಕೊಮ್ಮೆ, ಮೂರು ದಿನಕ್ಕೊಮ್ಮೆ ನೀರು ಪೂರೈಕೆಯ ಪರಿಣಾಮ ನಗರದ ಹಲವೆಡೆ ನೀರಿನ ಸಮಸ್ಯೆ ಎದುರಾಗುತ್ತದೆ.

ಆದರೆ ಈ ಬಾರಿ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್ ಡ್ಯಾಮ್‌ನಲ್ಲಿ ನೀರು ಲಭ್ಯತೆ ಹೇರಳವಾಗಿದೆ. ಅಲ್ಲದೇ ನೇತ್ರಾವತಿ ನದಿ ತೀರದುದ್ದಕ್ಕೂ ಇರುವ ಅಣೆಕಟ್ಟು ಗಳಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಈ ಹಿಂದೆ ತುಂಬೆ ಅಣೆಕಟ್ಟು ಒಂದೇ ಕುಡಿಯುವ ನೀರಿನ ಸಂಗ್ರಹಕ್ಕೆ ಪ್ರಧಾನವಾಗಿತ್ತು. ಆದರೆ ಈಗ ಬಿಳಿಯೂರು, ಎಎಂಆರ್, ಜಕ್ರಿಬೆಟ್ಟು ಡ್ಯಾಮ್ ಗಳಲ್ಲಿ ನೀರಿನ ಶೇಖರಣೆ ಭರ್ತಿಯಾಗಿದೆ.

ಸಾಕಷ್ಟು ಭಾಗಗಳಲ್ಲಿ ನೇತ್ರಾವತಿ ನದಿ ತೀರದ ಕೃಷಿಕರು ತಮ್ಮ ಬೆಳೆಗಳಿಗೆ ನೇತ್ರಾವತಿ ನದಿ ತೀರವನ್ನೇ ಆಶ್ರಯಿಸಿದ್ದಾರೆ. ಬೇಸಿಗೆ ಕಾಲದಲ್ಲಿ ನೀರಿನ ಅಭಾವದ‌ ಸೂಚನೆ ಸಿಗುತ್ತಿದ್ದಂತೆಯೇ ಜಿಲ್ಲಾಡಳಿತ ಕೃಷಿಕರ ಪಂಪ್ ಸೆಟ್‌ಗಳ‌ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿತ್ತು. ಆದರೆ ಈ ಬಾರಿ ನದಿಯಲ್ಲಿ‌ ನೀರಿನ ಮಟ್ಟ ಬೇಕಾದಷ್ಟಿದ್ದು, ಕೃಷಿಕರೂ ನಿರಾಳರಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಡ್ಯಾಂಗಳಲ್ಲಿ ಪ್ರಸ್ತುತ ಎಎಂಆರ್ ಡ್ಯಾಮ್‌ನಲ್ಲಿ 18.90 ಮೀ. ನೀರು, ತುಂಬೆ ಡ್ಯಾಮ್‌ನಲ್ಲಿ 5.70 ಮೀ. ನೀರು, ಹರೇಕಳ ಅಡ್ಯಾರ್ ಡ್ಯಾಮ್‌ನಲ್ಲಿ 1 ಮೀ. ನೀರು, ಬಿಳಿಯೂರು ಡ್ಯಾಮ್‌ನಲ್ಲಿ 4 ಮೀ. ನೀರು, ಜಕ್ರಿಬೆಟ್ಟು ಡ್ಯಾಮ್‌ನಲ್ಲಿ 3 ಮೀ. ನೀರು, ಮಳವೂರು ಡ್ಯಾಮ್‌ನಲ್ಲಿ 1.50 ಮೀ. ನೀರು, ಇರುವೈಲು ಡ್ಯಾಮ್‌ನಲ್ಲಿ 1.75 ಮೀ. ನೀರು ಲಭ್ಯವಿದೆ.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!