ಪಹಲ್ಗಮ್ನಲ್ಲಿ 26 ಪ್ರವಾಸಿಗರ ಹತ್ಯೆಗೈದ ಉಗ್ರರ ಕೃತ್ಯದ ಸಂಪೂರ್ಣ ವಿಡಿಯೋ ಸ್ಥಳೀಯ ಫೋಟೋಗ್ರಾಫರ್ ನ ಕ್ಯಾಮೆರಾದಲ್ಲಿ ಸೆರೆದಲ್ಲಿ ಸಿಕ್ಕಿರುವ ವಿಷಯ ಬೆಳಕಿಗೆ ಬಂದಿದೆ.

ಕ್ರೂರ ಕೃತ್ಯ ನಡೆದಾಗ ಗಾಬರಿಗೊಂಡ ಆತ ಓಡಿ ಹೋಗಿ ಸಮೀಪದ ಮರವೊಂದನ್ನು ಹತ್ತಿ ಉಗ್ರರಿಗೆ ಕಾಣದಂತೆ ಕುಳಿತಿದ್ದಾನೆ. ಅಲ್ಲಿಂದಲೇ ದಾಳಿಯ ಎಲ್ಲಾ ದೃಶ್ಯಗಳನ್ನು ಸೆರೆಹಿಡಿದಿದ್ದಾನೆ. ಈ ವಿಡಿಯೋ ಇಡೀ ಪ್ರಕರಣಕ್ಕೆ ಸಹಾಯ ಮಾಡಿದೆ. ಉಗ್ರರ ಪತ್ತೆಗೆ ತನಿಖಾ ಸಂಸ್ಥೆಗಳಿಗೆ ಅತ್ಯಂತ ನಿಖರ ಸಾಕ್ಷ್ಯವಾಗಿ ಹೊರಹೊಮ್ಮಿದೆ ಎಂದು ಮೂಲಗಳು ತಿಳಿಸಿವೆ.
ಇದು, ಉಗ್ರದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ತಂಡದ ಪಾಲಿಗೆ ಪ್ರಮುಖ ಸಾಕ್ಷಿಯಾಗಿದೆ. ವೀಡಿಯೋಗ್ರಾಫರ್‌ನನ್ನು ತನಿಖೆಗೆ ಒಳಪಡಿಸಿದ ಎನ್‌ಐಎ ತಂಡ, ಉಗ್ರರನ್ನು ಗುರುತಿಸಲು ವೀಡಿಯೋವನ್ನು ಪರಿಶೀಲಿಸುತ್ತಿದೆ.



