ಅಡುಗೆ ಅನಿಲ , ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಸದಸ್ಯರು ನಗರದ ಅಂಬೇಡ್ಕರ್ ವೃತ್ತದಿಂದ ಕ್ಲಾಕ್ ಟವರ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕೇಂದ್ರ ಸರ್ಕಾರವು ಇಂದು ಬೆಲೆಯನ್ನು ಏರಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದೆ . ರಾಹುಲ್ ಗಾಂಧಿಯನ್ನು ಪಪ್ಪು ಎಂದು ಮೋದಿ ಟೀಕೆ ಮಾಡಿದರು. ಆದರೆ ಅವರ ವರ್ಚಸ್ಸು ಮೋದಿಗೆ ಕಾಣಿಸಲೇ ಇಲ್ಲ. ರಾಹುಲ್ ಗಾಂಧಿಯ ಹೆಸರನ್ನು ಪ್ರತೀ ಬಾರಿ ಹೇಳ್ತಾರೆ ಯಾಕೆಂದ್ರೆ ಅವರನ್ನು ಕಂಡರೆ ಭಯ ಕೇಂದ್ರ ಸರ್ಕಾರದ ಬೆಲೆ ಏರಿಕೆಯಿಂದ ಸಾರ್ವಜನಿಕರು ಕಂಗೆಟ್ಟಿದ್ದಾರೆ. ಕೂಡಲೇ ಬೆಲೆ ಇಳಿಕೆ ಆಗಬೇಕು. ಇಂದು ಕೇಂದ್ರದಲ್ಲಿ ಬಿಜೆಪಿ ಸರಕಾರವು ಕೂದಲೆಳೆ ಅಂತರದಲ್ಲಿ ಅಧಿಕಾರಕ್ಕೆ ಬಂದಿದೆ. ಮೋದಿ ಚುನಾವಣೆಯಲ್ಲಿ ಗೆಲ್ತಾ ಇಲ್ಲದಿದ್ರೆ ಜೈಲಿಗೋ, ಮನೆಗೋ ಹೋಗ್ತಿದ್ರು ಎಂದರು.
ಮಾಜಿ ಸಚಿವ ರಮಾನಾಥ್ ರೈ ಮಾತನಾಡಿ , ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಇತ್ತು, ಆದ್ರೆ ಇಂದು ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆ ಆದ್ರೂ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚೇ ಇದೆ. ವಿಜಯೇಂದ್ರರಿಗೆ ಸ್ವಂತ ಬುದ್ಧಿ ಇಲ್ಲ, ಅವರು ಕಚ್ಚಾ ತೈಲ ಬೆಲೆ ಜಾಸ್ತಿಯೇ ಇದೆ ಅಂತ ಹೇಳ್ತಾರೆ. ಆದ್ರೆ ಕಚ್ಚಾ ತೈಲ ಬೆಲೆ ಕಡಿಮೆ ಆದ ವಿಷಯ ಅವರಿಗೆ ತಿಳಿಯಲೇ ಇಲ್ಲ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಸಾಮಾನ್ಯರಿಗೆ ತೊಂದ್ರೆ ಅಗ್ತಾ ಇರಲಿಲ್ಲ . ಆದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಏರಿದ ಬಳಿಕ ಅಚ್ಚೆ ದಿನ್ ಕೂಡಿ ಬರಲೇ ಇಲ್ಲ . ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಗ್ಗೆ ಪ್ರಸ್ತಾಪಿಸಿದ ಅವರು ಈ ದಾಳಿಯಲ್ಲಿ ಹಲವರು ಮಡಿದಿದ್ದಾರೆ. ಸೇನೆಯ ಅಧಿಕಾರ, ಇಲಾಖೆ ಅಧಿಕಾರ , ಗುಪ್ತಚರ ಇಲಾಖೆ ಅಧಿಕಾರ ಬಿಜೆಪಿ ಸರಕಾರದ ಕೈಯಲ್ಲಿ ಇರಲಿಲ್ವಾ ಎಂದು ಪ್ರಶ್ನೆಸಿದರು .
ಪ್ರತಿಭಟನಾ ಸಭೆಯಲ್ಲಿ ಪದ್ಮರಾಜ್ ಪೂಜಾರಿ , ಮಮತಾ ಗಟ್ಟಿ, ಜೆ ಆರ್ ಲೋಬೊ ಮತ್ತಿತರರು ಇದ್ದರು .



