ಗ್ಯಾಸ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಸಿರುವುದನ್ನು ವಿರೋದಿಸಿ ವಿಮೆನ್ ಇಂಡಿಯ ಮೂವ್‌ಮೆಂಟ್ ನೇತೃತ್ವದಲ್ಲಿ ನಗರದ ಕ್ಲಾಕ್ ಟವರ್ ಬಳಿ ಸೋಮವಾರ ಸಂಜೆ ಪ್ರತಿಭಟನೆ ನಡೆಯಿತು.

ಪ್ರತಿಭಟನೆಕಾರರು ಸರಕಾರದ ವಿರುದ್ಧ ಘೋಷಣೆ ಕೂಗಿ ಬೆಲೆ ಏರಿಕೆಯಿಂದಾಗಿ ಜನತೆಯ ಮೇಲೆ ಆಗಿರುವ ಹೊರೆಯನ್ನು ಇಳಿಸುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಮ್ ಮಂಗಳೂರು ನಗರ ಜಿಲ್ಲಾದ್ಯಕ್ಷೆ ನಿಶಾ ವಾಮಂಜೂರು ಅವರು ‘ ಪ್ರಧಾನಿ ನರೇಂದ್ರ ಮೋದಿ ಅವರ ಸಬ್ಕ ಸಾಥ್ ಸಬ್ಕ ವಿಕಾಸ್ ಎಲ್ಲ ಬಕ್ವಾಸ್ ಎಂಬುದು ದೇಶದ ಜನರಿಗೆ ಈಗ ಅರ್ಥವಾಗಿದೆ. ಜನರಿಗೆ ಬದುಕಲು ಸಾಧ್ಯವಿಲ್ಲದಂತೆ ಅಗತ್ಯ ವಸ್ತುಗಳಿಗೆ ಕೇಂದ್ರ ಸರಕಾರ ಬೆಲೆ ಏರಿಸಿದೆ. ಕಾರ್ಪೋರೇಟ್‌ಗಳನ್ನು ಬೆಂಬಲಿಸುವ ಭರದಲ್ಲಿ ಜನಸಾಮನ್ಯರನ್ನು ಸರಕಾರ ಮರೆತಿದೆ ಎಂದರು.
ವಿಮೆನ್ ಇಂಡಿಯ ಮೂವ್‌ಮೆಂಟ್ ರಾಜ್ಯಾಧ್ಯಕ್ಷೆ ಫಾತಿಮಾ ನಸೀಮಾ, ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಮೀಮಾ ತುಂಬೆ, ಜೊತೆ ಕಾರ್ಯದರ್ಶಿ ಅಝ್ವೀನಾ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.



