ಜನ ಮನದ ನಾಡಿ ಮಿಡಿತ

Advertisement

ಮಂಡ್ಯ: ನಾಪತ್ತೆಯಾಗಿದ್ದ ತಂದೆ, ಮಕ್ಕಳ ಮೃತ ದೇಹಗಳು KRS​ ವಿಸಿ ನಾಲೆಯಲ್ಲಿ ಪತ್ತೆ

12 ದಿನಗಳ ಹಿಂದೆ ನಾಪತ್ತೆಯಾಗಿದ್ದ ತಂದೆ ಹಾಗೂ ಇಬ್ಬರು ಮಕ್ಕಳ ಮೃತ ದೇಹಗಳು ಮಂಗಳವಾರ ಕೆ.ಆರ್.ಎಸ್​ನ ವಿಸಿ ನಾಲೆಯಲ್ಲಿ ಕಾರಿನ ಸಮೇತ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೂವರು ಅಪಘಾತದಿಂದ ಮೃತಪಟ್ಟಿದ್ದಾರಾ ಅಥವಾ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬುವುದು ಇನ್ನೂ ನಿಗೂಢವಾಗಿದೆ. 

ಕುಮಾರಸ್ವಾಮಿ, ಅದ್ವೈತ್​ (7) ಮತ್ತು ಅಕ್ಷರ (3) ಮೃತ ದುರ್ದೈವಿಗಳು. ಮೃತ ಕುಮಾರಸ್ವಾಮಿಯವರು ಮೂಲತಃ ಮೈಸೂರಿನ ಕೆ.ಆರ್.ನಗರದ ಹೆಬ್ಬಾಳುದವರು. ಕಳೆದ ಕೆಲ ವರ್ಷಗಳಿಂದ ಕುಟುಂಬದವರ ಜೊತೆ ಬೆಂಗಳೂರಿನಲ್ಲಿ ವಾಸವಿದ್ದರು. ಏಪ್ರಿಲ್​ 17 ರಂದು ಕೆ.ಆರ್.ನಗರಕ್ಕೆ ಹೋಗುವುದಾಗಿ ಪತ್ನಿಗೆ ಹೇಳಿ ತನ್ನ ಇಬ್ಬರು ಮಕ್ಕಳನ್ನು ಕರೆದುಕೊಂಡು ಕುಮಾರಸ್ವಾಮಿ ಕಾರಿನಲ್ಲಿ ಬೆಂಗಳೂರಿನಿಂದ ಹೊರಟಿದ್ದಾರೆ. ಆದರೆ, ಇಂದು ಆ ಮೂವರ ಮೃತ ದೇಹಗಳು ಕೆ.ಆರ್.ಎಸ್ ನಾರ್ಥ್ ಬ್ಯಾಂಕ್​ನ ವಿಸಿ ನಾಲೆಯಲ್ಲಿ ಕಾರಿನ ಸಮೇತ ಪತ್ತೆಯಾಗಿದ್ದು, ಇದು ಅಪಘಾತವೋ ಅಥವ ಆತ್ಮಹತ್ಯೆಯೋ ಎಂಬ ಅನುಮಾನ ಮೂಡಿದೆ.

ಏಪ್ರಿಲ್​ 17 ರ ರಾತ್ರಿ 8 ಗಂಟೆ ವೇಳೆ ಕುಮಾರಸ್ವಾಮಿಯವರು ತಮ್ಮ ತಂದೆಗೆ ಪೋನ್ ಮಾಡಿ ತಾವು‌ ಕೆ.ಆರ್.ಎಸ್ ಬಳಿ‌ ಇದ್ದು ಊರಿಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಅದಾದ ಬಳಿಕ ಪೋನ್ ಸ್ವಿಚ್ ಆಫ್ ಆಗಿದೆ. ಈ ಬಳಿಕ ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕುಟುಂಬಸ್ಥರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ, ಇಂದು ನಾಲೆಗೆ ಹರಿಸುತ್ತಿದ್ದ ನೀರನ್ನು ನಿಲ್ಲಿಸಿದಾಗ ಕಾರು ಪತ್ತೆಯಾಗಿದ್ದು, ಈ ವೇಳೆ ಮೂವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಕಾರಿನಲ್ಲಿ ಪತ್ತೆಯಾಗಿವೆ.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!