ಇದೇ ಮೊದಲ ಬಾರಿಗೆ ಮೇ 18 ರಂದು ಶಬರಿಮಲೆಗೆ ರಾಷ್ಟ್ರಪತಿ ದೌಪದಿ ಮುರ್ಮು ಭೇಟಿ ನೀಡಲಿದ್ದಾರೆ. ಪಂಪಾದಿಂದ ಇರುಮುಡಿ ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಬೆಟ್ಟವನ್ನು ಏರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ರಾಷ್ಟ್ರಪತಿಗಳ ಕಚೇರಿಯಿಂದ ಜಿಲ್ಲಾಧಿಕಾರಿ ಮತ್ತು ಪೊಲೀಸರಿಗೆ ಸೂಚನೆ ಬಂದಿದ್ದು, ಬ್ರೌಪದಿ ಮುರ್ಮು 18 ಮತ್ತು 19 ರಂದು ಶಬರಿಮಲೆಗೆ ಹೋಗಲಿದ್ದಾರೆ.
66 ವರ್ಷಕ್ಕಿಂತ ಮೇಲ್ಪಟ್ಟ ರಾಷ್ಟ್ರಪತಿ ದೌಪದಿ ಮುರ್ಮು, ಕುಮಾರಕೋಮ್ ನಿಂದ ಟೇಕ್ ಆಫ್ ಆದ ನಂತರ ನಿಲಕ್ಕಲ್ ನಲ್ಲಿ ಹೆಲಿಕಾಪ್ಟರ್ ನಲ್ಲಿ ಇಳಿಯಲಿದ್ದಾರೆ. ತದನಂತರ ಕಾರಿನಲ್ಲಿ ಪಂಪಾ ತಲುಪಿ ಇರುಮುಡಿ ಹೊತ್ತು ತೆರಳಲಿದ್ದಾರೆ.
ಮುರ್ಮು ಅವರು ದೇವಸ್ಯಂ ಅತಿಥಿ ಗೃಹ ಅಥವಾ ಸನ್ನಿಧಾನಂನಲ್ಲಿರುವ ಶಬರಿ ಅತಿಥಿ ಗೃಹದಲ್ಲಿ ತಂಗಲಿದ್ದಾರೆ. ದರ್ಶನದ ಸಮಯವನ್ನು ನಿರ್ದಿಷ್ಟಪಡಿಸಲಾಗಿಲ್ಲ. ಭೇಟಿಯ ಸಮಯದಲ್ಲಿ ಮುರ್ಮು ಅವರು ಕೊಟ್ಟಾಯಂ ಮತ್ತು ಕುಮಾರಕೋಮ್ನಲ್ಲಿ ತಂಗುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. .



