ಉತ್ತರಪ್ರದೇಶದ ಬದೌನ್‍ನಲ್ಲಿ ಅರಶಿನ ಶಾಸ್ತ್ರದ ವೇಳೆ ನೃತ್ಯ ಮಾಡುವಾಗ 22 ವರ್ಷದ ವಧು ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣವಾದ ಘಟನೆಯೊಂದು ನಡೆದಿದೆ.ಖುಷಿಯಿಂದ ಇರಬೇಕಾದ ಮದುವೆಮನೆ ದುಃಖದಿಂದ ಮಡುಗಟ್ಟಿದೆ.

ಬದೌನ್ ಜಿಲ್ಲೆಯ ಇಸ್ಲಾಂನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ನೂರ್ಪುರ್ ಪಿನೋನಿ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಅರಶಿನ ಶಾಸ್ತ್ರದ ನಂತರ ವಧು ತನ್ನ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಂತೋಷದಿಂದ ನೃತ್ಯ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದಾಳೆ. ತಕ್ಷಣ ಎಲ್ಲರೂ ಸೇರಿ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅಲ್ಲಿ ಆಕೆ ಹೃದಯಾಘಾಯದಿಂದ ಸಾವನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.



