ದಕ್ಷಿಣ ಕನ್ನಡ : ದೇಶದಲ್ಲಿ 10 ರೂಪಾಯಿ ಸೇರಿದಂತೆ ಬಹುಮುಖ ಬೆಲೆಯ ವಿವಿಧ ನಾಣ್ಯಗಳು ಚಾಲನೆಯಲ್ಲಿದ್ದು, ಅಗತ್ಯ ಮುಖಬೆಲೆಯ ನಾಣ್ಯಗಳನ್ನು ಹಾಗೂ ನೋಟುಗಳನ್ನು ಸಂಬಂಧ ಪಟ್ಟ ಇಲಾಖೆ ನಿರ್ವಹಿಸುತ್ತದೆ
ಆದರೆ ನಾವಿಲ್ಲಿ ಹೇಳ್ತಾ ಇರೋದು ಹತ್ತು ರೂಪಾಯಿ ಮುಖಬೆಲೆಯ ನಾಣ್ಯದ ಚಲಾವಣೆ ಬಗ್ಗೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವ್ಯಾಪಾರಸ್ಥರು ಗ್ರಾಹಕರು ಬಸ್ ಕಂಡಕ್ಟರ್ ಗಳು ಹೀಗೆ ಬಹಳಷ್ಟು ನಾಗರಿಕರು 10 ರೂ ಮುಖ ಬೆಲೆಯ ನಾಣ್ಯವನ್ನು ಸ್ವೀಕರಿಸಲು ಹಿಂದೇಟು ಹಾಕುತ್ತಿರುವುದು ವಿಷಾದನೀಯ. ಈಗಾಗಲೇ ಸಂಬಂಧ ಪಟ್ಟ ಇಲಾಖೆಯು ಸ್ಪಷ್ಟೀಕರಣ ನೀಡಿದ್ದು ರಾಷ್ಟ್ರದಲ್ಲಿ 10 ರೂ ಮುಖಬೆಲೆಯ ನಾಣ್ಯ ಚಾಲನೆಯಲ್ಲಿ ಇದೆ ಎಂದು ಪ್ರಕಟಣೆಯನ್ನೇ ಹೊರಡಿಸಿದೆ ಆದರೂ ಬಹು ಪ್ರಯೋಜನಕಾರಿ ಎನಿಸಿಲ್ಲ ಎಂಬುದು ಬಹುತೇಕರ ಅನಿಸಿಕೆ,ರಾಜ್ಯದಲ್ಲಿ ಎಲ್ಲಾ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು, ಸರ್ಕಾರದ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ವದಂತಿಗಳನ್ನು ನಂಬದೆ, ರೂ.10/-ರ ಮುಖಬೆಲೆಯ ನಾಣ್ಯಗಳನ್ನು ಸ್ವೀಕರಿಸಿ, ಚಲಾವಣೆಗೊಳಿಸಬೇಕು ಎಂದು ಸರಕಾರ ಕಟ್ಟಪ್ಪಣೆ ಮಾಡಬೇಕಿದೆ ಅಲ್ಲದೆ ಇದನ್ನು ಜಿಲ್ಲಾಡಳಿತ ಕೂಡ ಅನುಷ್ಠಾನಗೊಳಿಸಬೇಕಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ರುಪಾಯಿ ನಾಣ್ಯಗಳು ಹೆಚ್ಚಿನ ಕಡೆ ಸ್ವೀಕರಿಸುವುದೇ ಇಲ್ಲ ಎನ್ನುವುದು ಸಾರ್ವಜನಿಕರ ಆಳಲು, ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಿದ್ದು, ಪ್ರಕಟಣೆ ಹೊರಡಿಸಬೇಕಿದೆ ಎಂಬುದು ಸಾರ್ವಜನಿಕ ಅಭಿಪ್ರಾಯ .
10 ರೂ. ಗಳ ನಾಣ್ಯಗಳನ್ನು ಹಲವಾರು ಸರಕಾರಿ, ಅನುದಾನಿತ ಸಂಸ್ಥೆಗಳು, ಖಾಸಗಿ ಸಂಸ್ಥೆಗಳಲ್ಲಿ ಸ್ವೀಕರಿಸುತ್ತಿಲ್ಲ, ಬಸ್‍ಗಳಲ್ಲಿ ಪ್ರಯಾಣಿಕರಿಂದ ಸ್ವೀಕರಿಸುತ್ತಿಲ್ಲ, ಈ ಕುರಿತು ಕ್ರಮ ಜರುಗಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಮಹಾಪ್ರಬಂಧಕರು, ಕಳೆದ ತಿಂಗಳು ಜರುಗಿದ ರಾಜ್ಯ ಮಟ್ಟದ ಬ್ಯಾಂಕಿಂಗ್ ಸಮಿತಿಯ ಸಮಿತಿ ಸಭೆಯಲ್ಲಿ ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಆರ್ಥಿಕ ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ) ಸರ್ಕಾರದ ಕಾರ್ಯದರ್ಶಿ ಅವರು 10 ರೂ. ನಾಣ್ಯವನ್ನು ಎಲ್ಲರೂ ಸ್ವೀಕರಿಸಿ, ಚಲಾವಣೆಗೊಳಿಸಲು ಜಾಗೃತಿ ಮೂಡಿಸುವಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುತ್ತಾರೆ. ಸಮರ್ಪಕ ಅನುಷ್ಠಾನ ಆಗಬೇಕಿದೆ .
ಇದರ ಮೊದಲ ಹೆಜ್ಜೆಯಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್‍ಗಳಲ್ಲಿ 10 ರೂ. ಗಳ ನಾಣ್ಯವನ್ನು ಸಾರ್ವಜನಿಕರಿಂದ ಸ್ವೀಕರಿಸಬೇಕು ಹಾಗೂ ಚಲಾವಣೆಗೊಳಿಸಬೇಕು. ಅಲ್ಲದೆ ಎಲ್ಲಾ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಸರ್ಕಾರದ ಇಲಾಖೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ತಮ್ಮ ಅನುಮಾನಗಳನ್ನು ಬದಿಗಿಟ್ಟು, ರೂ.10/-ರ ಮುಖಬೆಲೆಯ ನಾಣ್ಯಗಳನ್ನು ಕಾನೂನಾತ್ಮಕವಾಗಿ ಸ್ವೀಕರಿಸಬೇಕು ಹಾಗೂ ಚಲಾವಣೆಗೊಳಿಸಬೇಕು. ಎಂಬುದು ಆದೇಶ.
ರೂ.10/-ರ ನಾಣ್ಯ ಚಲಾವಣೆ ಬಗ್ಗೆ ಯಾವುದೇ ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ರಿಸರ್ವ್ ಬ್ಯಾಂಕ್ ಮನವಿ ಮಾಡಿದ್ದು, ಯಾವುದೇ ಹಿಂಜರಿಕೆಯಿಲ್ಲದೇ ತಮ್ಮ ಎಲ್ಲಾ ವಹಿವಾಟುಗಳಲ್ಲಿ ರೂ.10/-ರ ನಾಣ್ಯವನ್ನು ಕಾನೂನುಬದ್ಧವಾಗಿ ಸ್ವೀಕರಿಸುವುದನ್ನು ಮುಂದುವರೆಸಬೇಕು ಎಂಬುದು ರಾಜ್ಯ ಸರ್ಕಾರದ ಮನವಿಯಾಗಿದ್ದು, ಹತ್ತು ರೂಪಾಯಿ ಮುಖಬೆಲೆಯ ನಾಣ್ಯದ ಚಲಾವಣೆ ಬಗ್ಗೆ ಸಮಸ್ಯೆ ಉಂಟಾದಲ್ಲಿ ಸಂಬಂಧ ಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಸಾರ್ವಜನಿಕರು ಸಹಕರಿಸುವುದು ಮತ್ತು ಗಮನ ಕೊಡುವುದು ಒಳಿತು ಆದಷ್ಟು ಬೇಗ ಸಮಸ್ಯೆ ಬಗೆಹರಿಯಲಿ ಎಂದು ಆಶಿಸೋಣ.



