ಜನ ಮನದ ನಾಡಿ ಮಿಡಿತ

Advertisement

ಕಡಬ :ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ರಾಜಗೋಪುರ ಮತ್ತು ಮಹಾದ್ವಾರದ ಶಿಲಾನ್ಯಾಸ

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸ ಕಾರ್ಯ ಭರದಿಂದ ಸಾಗುತ್ತಿದ್ದು ಮೇ.5 ರಂದು ರಾಜಗೋಪುರ ಮತ್ತು ರಥಭೀದಿಯಲ್ಲಿ ಮಹಾದ್ವಾರ ಶಿಲಾನ್ಯಾಸ ಕಾರ್ಯಕ್ರಮ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇ ಮೂ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.


ಶ್ರೀಧಾಮ‌‌ ಮಾಣಿಲದ ಮೋಹನದಾಸ ಸ್ವಾಮೀಜಿಗಳು ಆಶ್ರೀ ೯ವಾಚನ ನೀಡಿ ಮಾತನಾಡಿ ಧೌಮ್ಯ ಮಹರ್ಷಿಗಳಿಂದ ಪ್ರತಿಷ್ಟಾಪನೆಗೊಂಡ ಶ್ರೀ ಕ್ಷೇತ್ರ ಶರವೂರು ಆ ಕಾಲದಲ್ಲಿ ನಿರ್ಜನ ಪ್ರದೇಶವಾಗಿ, ತಪೋಭೂಮಿಯಾಗಿ ಗುಡ್ಡಗಾಡುಪ್ರದೇಶವಾಗಿ ಸರೋವರವಾಗಿದ್ದ ಪ್ರದೇಶವೇ ಶರವೂರು ಆಗಿದ್ದು, ಇಲ್ಲಿ ಸಿಂಹವಾಹಿನಿಯಾದ ದುರ್ಗಾಪರಮೇಶ್ವರಿ ದೇವಿಯ ನಾಗಮಾಣಿಕ್ಯದ ಪ್ರಭೆಯಂತೆ
ಧೌಮ್ಯ ಮಹರ್ಷಿಗಳಿಗೆ ಒಲಿದು ಮುಂದಕ್ಕೆ ಈ ಸ್ಥಳದಲ್ಲಿ ತಪಸ್ಸು ಮಾಡಿ ಮುಂದೊಂದು ದಿನ ದೊಡ್ಡ ಕ್ಷೇತ್ರವಾಗಿ ಬೆಳಗಬೇಕೆಂದು ಶ್ರೀ ದೇವಿಯ ಅಪ್ಪಣೆಯಂತೆ ಶ್ರೀ ಕ್ಷೇತ್ರ ಬೆಳಗುತ್ತಿದೆ.ಸಮಗ್ರ ಜೀರ್ಣೋದ್ಧಾರ ಕೆಲಸ ಕಾರ್ಯದಲ್ಲಿ ನಾವೆಲ್ಲರೂ ಒಂದೇ ಎನ್ನುವ ನೆಲೆಗಟ್ಟಿನ ಮೇಲೆ ಕೆಲಸ ಕಾರ್ಯಗಳನ್ನು ಮಾಡಿ ದೇವಸ್ಥಾನ ಜೀರ್ಣೋದ್ಧಾರ ಗೊಳಿಸಬೇಕು.ಜೀರ್ಣೋದ್ಧಾರ ಗೊಂಡು ಬ್ರಹ್ಮಕಲಶ ಆದ ಶ್ರೀ ದೇವಿಯ ಅನುಗ್ರಹ ದಿಂದ ನಮ್ಮಲ್ಲಿರುವ ದಾಢ್ಯ,ಮೌಡ್ಯ,ಅವಿಶ್ವಾಸ,ಆಕ್ರೋಶ,ಉದ್ವೇಗ ಕಡಿಮೆಯಾಗಿ ಊರು ಅಭಿವೃದ್ಧಿ ಗೊಳ್ಳುತ್ತದೆ ಎಂದು ತಿಳಿಸಿ ಕನ್ಯಾನ ಕೂಳೂರು ಡಾ! ಸದಾಶಿವ ಶೆಟ್ಟಿ ಯವರು ಸಂಪತ್ತಿನ ವ್ಯಾಮೋಹ ಇಲ್ಲದೇ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು, ಧಾರ್ಮಿಕ,ಸಾಮಾಜಿಕ ಕ್ಷೇತ್ರಗಳಿಗೆ ನೀಡಿದ್ದಾರೆ ಎಂದು ತಿಳಿಸಿ ಗ್ರಾಮದೇವಸ್ಥಾನ ಮತ್ತು ಸೀಮೆ ದೇವಸ್ಥಾನ ಮನುಷ್ಯನಿಗೆ ಬೆನ್ನೆಲುಬು ಇದ್ದಂತೆ ಅದ್ದರಿಂದ ಸೀಮೆಯ ಹಾಗು ಊರಪರವೂರ ಭಕ್ತಾಧಿಗಳು ಸಮಗ್ರ ಜೀರ್ಣೋದ್ಧಾರ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ತಿಳಿಸಿ, ಬ್ರಹ್ಮಕಲಶ ಆಗುವವರೆಗೆ ನಾನು ನಿಮ್ಮೂಂದಿಗೆ ಇದ್ದೇನೆ ಎಂದು ತಿಳಿಸಿಶುಭಾಹಾರೈಸಿದರು.

 

ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈನ ಅಡಳಿತ ನಿರ್ದೇಶಕರಾದ ಡಾ.ಸದಾಶಿವ ಶೆಟ್ಟಿ ಕುಳೂರು ಕನ್ಯಾನ ರಾಜಗೋಪುರ ಶಿಲಾನ್ಯಾಸ ನೇರವೆರಿಸಿ ಮಾತನಾಡಿ ದೇವಸ್ಥಾನದ ಇತಿಹಾಸ ಹಾಗು ಶಕ್ತಿಯನ್ನು ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಗಳು ಸವಿವಿಸ್ತರವಾಗಿ ತಿಳಿಸಿದ್ದಾರೆ.ಮಧೂರು ಮಹಾಗಣಪತಿ ದೇವಸ್ಥಾನದಿಂದ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನ ತನಕ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ.ಮಧೂರು ದೇವಸ್ಥಾನದಲ್ಲಿ ಸ್ವಾಮೀಜಿಗಳು ಹಗಲು ರಾತ್ರಿ ಎನ್ನದೇ ಸೇವೆ ಮಾಡಿದವರ ಅವರ ಸೇವೆಯನ್ನು ಇಲ್ಲಿ ಕೂಡ ಬಳಸಿಕೊಳ್ಳಿ ಎಂದು ತಿಳಿಸಿ ನಾವೆಲ್ಲರೂ ಒಟ್ಟಾಗಿ, ಒಗ್ಗಟ್ಟಾಗಿ ಅತೀ ಪುರಾತನ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಬೇಕು .ಬೇರೆ ಧರ್ಮದವರನ್ನು ನಾವು ವಿರೋದ ಮಾಡುತ್ತಿಲ್ಲ, ನಮ್ಮ ಮಕ್ಕಳಿಗೆ ಹಿಂದು ಧರ್ಮದ ಧಾರ್ಮಿಕ ಶಿಕ್ಷಣ ನೀಡಬೇಕೆಂದು ತಿಳಿಸಿ ಇತ್ತಿಚ್ಚಿಗೆ ನಡೆದ ಕಾಶ್ಮೀರದಲ್ಲಿ ನಡೆದ ನರಮೇದದ ಬಗ್ಗೆ ವಿಷಾಧ ವ್ಯಕ್ತಪಡಿಸಿ,ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರವನ್ನು ನಾವೆಲ್ಲರೂ ಒಟ್ಟು ಸೇರಿ ಮಾಡೋಣ,ಅದಷ್ಟು ಬೇಗ ಸಮಗ್ರ ಜೀರ್ಣೋದ್ಧಾರ ಗೊಂಡು ಬ್ರಹ್ಮಕಲಶ ನೇರವೆರಲಿ ಎಂದು ಹಾರೈಸಿದರು.ಪುತ್ತೂರಿನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಮಾತನಾಡಿ ಶರವೂರು ದುರ್ಗಾಪರಮೇಶ್ವರಿ ದೇವಿಯ ಅನುಗ್ರಹ ದಿಂದ ಎರಡು ಬಾರಿ ಪುತ್ತೂರಿನ ಶಾಸಕಿಯಾಗಿದ್ದೇನೆ ಎಂದು ತಿಳಿಸಿ ಕನ್ಯಾನ ಕೂಳೂರು ಡಾ!.ಸದಾಶಿವ ಶೆಟ್ಟಿ ಯವರು ಮಧೂರು ಮಹಾಗಣಪತಿ ದೇವಸ್ಥಾನಕ್ಕೆ ನೀಡಿದ್ದಷ್ಟು ದೇಣಿಗೆ ಶರವೂರಿಗೆ ನೀಡದಿದ್ದರೂ ಅದಕ್ಕೆ ಸಮಾನವಾದ ದೇಣಿಗೆಯನ್ನು ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನೀಡುವಂತೆ ವಿನಂತಿಸಿದರು.ಸಭೆಯಲ್ಲಿ ಡಾ! ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ನವರನ್ನು ಡಾಕ್ಟರೇಟ್ ಪದವಿ ಸಿಕ್ಕಿದ್ದಕ್ಕೆ ಸಭೆಯಲ್ಲಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಉಪಸ್ಥಿತರಿದ್ದರು.

ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹೇಮಂತ್ ರೈ ಮನವಳಿಕೆಗುತ್ತು ಕ್ಷೇತ್ರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ವಿ.ಜೆ.ವಿಖ್ಯಾತ್ ಕಾರ್ಯಕ್ರಮ ನಿರೂಪಿಸಿ,ಶ್ರೇಯಾ ಆಚಾರ್ಯ ಪ್ರಾರ್ಥಿಸಿ ,ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಧಾಕೃಷ್ಣ ರೈ ಪರಾರಿಗುತ್ತು, ಅಭಿವೃದ್ಧಿ ಸಮಿತಿ ಗೌರವ ಉಪಾಧ್ಯಕ್ಷರಾದ ದಯಾನಂದ ರೈ ಮನವಳಿಕೆಗುತ್ತು, ಸದಸ್ಯರಾದ ವಿಠಲ ರೈ ಕೊಣಾಲುಗುತ್ತು,ವಿಜಯ ಕೆದಿಲ,ಉತ್ಸವ ಸಮಿತಿಯ ಅಧ್ಯಕ್ಷರಾದ ಲಕ್ಷೀ೬ ನಾರಾಯಣ ಪ್ರಭು ಅತಿಥಿಗಳನ್ನು ಸ್ವಾಗತಿಸಿ, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಕೆ.ಸುಬ್ರಹ್ಮಣ್ಯ ರಾವ್ ನಗ್ರಿ ವಂದಿಸಿದರು.ಕಾರ್ಯಕ್ರಮದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು, ಸೇರಿದಂತೆ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಆರ್ಚಕರು, ಸಿಬ್ಬಂದಿ ವರ್ಗದವರು ಊರಪರವೂರ ಭಕ್ತಾದಿಗಳು ಸಹಕರಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿನ ಸದಸ್ಯರಾದ ಮಲ್ಲಿಕಾ ಪಕಳ,ಪುತ್ತೂರು ಕೋಟಿ ಚೆನ್ನಯ ಕಂಬಳಸಮಿತಿ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ, ಪುಣಚ ಮಹಿಷಮರ್ದಿನಿ ದೇವಸ್ಥಾನದ ಅಡಳಿತ ಸಮಿತಿಯ ಅಧ್ಯಕ್ಷರಾದ ಮಾರಪ್ಪ ಶೆಟ್ಟಿ ಬೈಲುಗುತ್ತು,
ದ.ಕ ಜಿಲ್ಲಾ ಬಿ.ಜೆ.ಪಿ ಯುವಮೋರ್ಚ ಉಪಾಧ್ಯಕ್ಷರಾದ ಸಹಜ್ ರೈ ಬಳ್ಳೆಜ್ಜ,ಪ್ರಗತಿಪರ ಕೃಷಿಕರಾದ ಸಂತೋಷ್ ರೈ ಇಳಂತಾಜೆ,ಲಕ್ಷ್ಮಣ ಕರಂದ್ಲಾಜೆ,ವ್ಯವಸ್ಥಾಪನ ಸಮಿತಿಯ ಮಾಜಿಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ, ದಾಮೋದರ ಗೌಡ ಕಕ್ವೆ,ಉಪತಹಶೀಲ್ದಾರರಾದ ಗೋಪಾಲ. ಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು,ಊರಪರವೂರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಬೆಳಿಗ್ಗೆ ಜಿಲ್ಲಾ ಪ್ರಶಸ್ತಿ ಪುರಸ್ಕೃತ ಜಯಂತ್ ವೈ ನೇತೃತ್ವದ ಸಾಕ್ಷಾತ್ ಶಿವ ಭಜನಾ ಮಂಡಳಿ ಚಾರ್ವಾಕ ಇವರಿಂದ ಕುಣಿತ ಭಜನೆಯ ಪದ್ಯಭಾಗ ನಿರ್ವಹಣೆ,
ಕುಣಿತ ಭಜನಾ ತಂಡಗಳಾದ
ಶರವೂರು ಸಂಸ್ಕಾರ ಶಿಬಿರದ ಮಕ್ಕಳ ಭಜನಾ ತಂಡ ,
ಶ್ರೀ ದುರ್ಗಾ ಶಕ್ತಿ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ಮಂಡಳಿ ಆಲಂಕಾರು ,
ಶ್ರೀರಾಮ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ಮಂಡಳಿ ಸಬಳೂರು,
ಶ್ರೀ ಆದಿಶಕ್ತಿ ಭಜನಾ ಮಂಡಳಿ ಶರವೂರು ,
ಶ್ರೀ ಪಂಚಲಿಂಗೇಶ್ವರ ಮಕ್ಕಳ ಕುಣಿತ ಭಜನಾ ಮಂಡಳಿ ಕುದ್ಮಾರು,ಬಹಳ ಅಚ್ಚುಕಟ್ಟಾಗಿ ಭಜನಾ ಕಾರ್ಯಕ್ರಮ .ಸ್ವಾಮೀಜಿಗಳನ್ನು ಮತ್ತು ಅತಿಥಿಗಳನ್ನು ಹಾಗೂ ಪೂರ್ಣಕುಂಭ ಮತ್ತು ಚಂಡೆವಾಧನದೊಂದಿಗೆ ಸ್ವಾಗತಿಸಲಾಯಿತು.

Leave a Reply

Your email address will not be published. Required fields are marked *

ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ರಿಕ್ಷಾ ನಿಲ್ಲಿಸಿ ಚಾಲಕ ಕಾಣೆ..!

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಗ್ರಾಮದ ಚೆನ್ನಕೇಶವ ನಾಪತ್ತೆ

ಬಂಟ್ವಾಳ: ಕಾಮಗಾರಿಯ ಪ್ರಗತಿಯ ಕುರಿತು ಪುರಸಭಾ ಜನಪ್ರತಿನಿಧಿಗಳ ಸಭೆ….!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೇಪು ಗ್ರಾಮ ಪಂಚಾಯಿತಿಗೆ ಕಿಶೋರ್ ಕುಮಾರ್ ಭೇಟಿ…!

ಬಂಟ್ವಾಳ: ಕಾರು ಮೇಲ್ಸೇತುವೆಗೆ ಡಿ*ಕ್ಕಿ; ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಚಾಲಕ…!

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

error: Content is protected !!