ಸುಮನಸಾ ಕೊಡವೂರು ಸಂಸ್ಥೆ ಮಕ್ಕಳಿಗಾಗಿ ಕೊಂಡಾಟ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಪ್ರತಿದಿನ ಮಕ್ಕಳಿಗೆ ವಿವಿಧ ವಿಭಾಗಗಳಲ್ಲಿ ವಿಶೇಷ ತರಬೇತಿಯನ್ನು ನೀಡಲಾಗಿದೆ.

ರಂಗಭೂಮಿಯ ಬಗ್ಗೆ ಮಕ್ಕಳಿಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ವೈದೇಹಿ ರಚಿಸಿದ ಝಂ ಝಂ ಆನೆ ಮತ್ತು ಪುಟ್ಟ ಎಂಬ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಅಕ್ಷತ್ ಅಮೀನ್ ಶಿಬಿರದ ನಿರ್ದೇಶಕರಾಗಿದ್ದು, ನಾಟಕವನ್ನು ದಿವಾಕರ್ ಕಟೀಲ್ ನಿರ್ದೇಶನ ಮಾಡಿದ್ದಾರೆ. ಸುಮನಸಾ ತಂಡದ ಮುಖ್ಯಸ್ಥರಾಗಿರುವ ಪ್ರಕಾಶ್ ಕೊಡವೂರು ಮತ್ತು ಬಳಗ ಈ ವಿಶೇಷ ಶಿಬಿರವನ್ನು ಆಯೋಜನೆ ಮಾಡಿದೆ.



