ಜನ ಮನದ ನಾಡಿ ಮಿಡಿತ

Advertisement

ನವದೆಹಲಿ: ಸೂಪರ್ ಪವರ್ ಆದ ಬ್ರಹ್ಮೋಸ್.. ಭಾರತದ ಕ್ಷಿಪಣಿಗೆ 17 ದೇಶಗಳ ಬೇಡಿಕೆ

ಭಾರತದ ತಾಕತ್ತು ಈಗ ಇಡೀ ಜಗತ್ತಿಗೆ ಗೊತ್ತಾಗಿದೆ. ಕ್ಯಾತೆ ತೆಗೆದ ವೈರಿ ರಾಷ್ಟ್ರಕ್ಕೆ ಭಾರತ ಆತ್ಮನಿರ್ಭರದ ಅಸ್ತ್ರಗಳಿಂದಲೇ ಮುಟ್ಟಿ ನೋಡಿಕೊಳ್ಳುವ ಪೆಟ್ಟು ಕೊಡಲಾಗಿದೆ. ಭಾರತ ದೇಶಕ್ಕಾಗಿ ಹೋರಾಡಿದ ರೀತಿ ಕಂಡು ಅಮೆರಿಕಾ, ಚೀನಾದಂತಹ ದೈತ್ಯ ರಾಷ್ಟ್ರಗಳೇ ದಂಗಾಗಿ ಹೋಗಿವೆ.

ಆಪರೇಷನ್ ಸಿಂಧೂರ ಬಳಿಕ ಭಾರತದ ಬ್ರಹ್ಮೋಸ್ ಕ್ಷಿಪಣಿಗೆ ಭಾರೀ ಬೇಡಿಕೆ ಬಂದಿದೆ. ಬ್ರಹ್ಮೋಸ್ ಕ್ಷಿಪಣಿ ಪಾಕ್ ಏರ್ ಬೇಸ್, ಉಗ್ರ ನೆಲೆಯನ್ನ ಛಿದ್ರ, ಛಿದ್ರ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ. ಭಾರತದ ಬ್ರಹ್ಮೋಸ್ ಕ್ಷಿಪಣಿಗಾಗಿ ಜಗತ್ತಿನ 17 ದೇಶಗಳಿಂದ ಈಗ ಬೇಡಿಕೆ ಬಂದಿದೆ. ಭೂಮಿಯ ಮೇಲಿನ ಅತ್ಯಂತ ವೇಗದ ಕ್ರೂಸ್ ಮಿಸೈಲ್ ಬ್ರಹ್ಮೋಸ್ ಭೂಮಿ, ಸಮುದ್ರ, ವಾಯು ನೆಲೆಯಿಂದ ನಿಖರವಾದ ದಾಳಿ ಮಾಡುತ್ತೆ ಭಾರತದ ಬ್ರಹ್ಮಾಸ್ತ್ರ ಅಂತಲೇ ಕರೆಸಿಕೊಳ್ಳುವ ಬ್ರಹ್ಮೋಸ್ ಬರೋಬ್ಬರಿ 800 ಕಿಲೋ ಮೀಟರ್ ರೇಂಜ್ ಹೊಂದಿದ್ದು, ನಿಮಿಷಗಳಲ್ಲಿ 300 ಕಿಲೋ ಮೀಟರ್ ಸಾಗುವ ಸಾಮರ್ಥ್ಯವಿದೆ.

ಒಂದೇ ಸಾರಿ 300 ಕೆಜಿಯ ಸ್ಫೋಟಕ ಹೊತ್ತೊಯ್ಯಬಲ್ಲ ಸಾಮರ್ಥ್ಯವಿದ್ದು, ಜಿಪಿಎಸ್ ಆಧಾರಿತ ಗೈಡೆಡ್ ಸಿಸ್ಟಮ್ ಬ್ರಹ್ಮೋಸ್‌ನಲ್ಲಿದೆ. ಇನ್ನೂ ವಿಶೇಷ ಏನಂದ್ರೆ ಸ್ವಯಂ ರಕ್ಷಣೆಯ ಸಿಗ್ನಲ್ ಜಾಮಿಂಗ್ ವ್ಯವಸ್ಥೆ ಕೂಡ ಬ್ರಹ್ಮೋಸ್‌ನಲ್ಲಿದೆ. 8.4 ಮೀಟರ್ ಉದ್ದ, 6 ಮೀಟರ್ ಅಗಲವಿರೋ ಮಿಸೈಲ್ ಗುರಿಯಿಟ್ರೆ ಟಾರ್ಗೆಟ್ ಮಿಸ್ಸೇ ಆಗಲ್ಲ. ಬ್ರಹ್ಮೋಸ್‌ನಲ್ಲಿ ಸ್ಟೆಲ್ತ್ ಫೀಚರ್ ಇದ್ದು, ರಾಡಾರ್ ಕಣ್ಣಿಗೆ ಬೀಳುವ ಸಾಧ್ಯತೆ ಕಡಿಮೆ ಮಾಡುವ ರೀತಿಯಲ್ಲಿ ಕ್ಷಿಪಣಿಯನ್ನ ಅಭಿವೃದ್ಧಿ ಪಡಿಸಲಾಗಿದೆ. ಶತ್ರುದೇಶದ ರಾಡಾರ್‌ನಲ್ಲೇ ಸಾಗಿ ನಿಶ್ಚಿತ ಗುರಿಯನ್ನ ಈ ಬ್ರಹ್ಮೋಸ್ ಹೊಡೆದುರುಳಿಸುತ್ತೆ. ನೀರು ನೆಲ ಆಕಾಶ ಮಾತ್ರವಲ್ಲ ಹಡಗು, ಪೈಟರ್ ಜೆಟ್, ಸಬ್ ಮರೀನ್ ಮೂಲಕ ಹೇಗ್ ಬೇಕಾದ್ರೂ ದಾಳಿ ನಡೆಸಬಹುದು. ಬ್ರಹ್ಮೋಸ್ ಹೆಸರು ಹೇಗೆ ಬಂತು ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕವಾ ನದಿಗಳ ಹೆಸರಿನಿಂದ ಇದಕ್ಕೆ ಬ್ರಹ್ಮೋಸ್ ಅಂತ ಹೆಸರಿಡಲಾಗಿದೆ. ಇದು ಭಾರತ ಹಾಗೂ ರಷ್ಯಾದ ಸ್ನೇಹ ಸಂಬAಧಕ್ಕೆ ಉದಾಹರಣೆಯಾಗಿದೆ. ಈ ಕ್ಷಿಪಣಿಯ ಪರಿಕಲ್ಪನೆಯು 1990ರ ದಶಕದಲ್ಲಿ ರೂಪುಗೊಂಡಿತ್ತು.

 

 

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

ಬಂಟ್ವಾಳ: ಮೊಡಂಕಾಪು ಆಯ್ಯಪ್ಪ ಮಂದಿರದಲ್ಲಿ ನಡೆದ ಸಭೆಯಲ್ಲಿ ಮೂರನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಸುನಿಲ್ ಎನ್

ಬಂಟ್ವಾಳ: ಸುರಿದ ಮಳೆಗೆ ಅವರಣಗೋಡೆ ಕುಸಿದು ಬಿದ್ದು ಹಾನಿ…!

ಪುತ್ತೂರಿನ ಪ್ರಕರಣ, ಕಾರ್ಕಳದ ಅಭಿಷೇಕ್ ಆತ್ಮಹತ್ಯೆಗೆ ಸಂಬಂಧಿಸಿ ಗ್ರಹಸಚಿವರಿಗೆ ಐವನ್ ಡಿಸೋಜಾ ಅವರಿಂದ ಮನವಿ

error: Content is protected !!