ಜನ ಮನದ ನಾಡಿ ಮಿಡಿತ

Advertisement

ಉಳ್ಳಾಲ: ಡಿಸೆಂಬರ್ ತಿಂಗಳೊಳಗೆ 24 ಕುಡಿಯುವ ನೀರು ಪೂರೈಕೆ : ಯು.ಟಿ.ಖಾದರ್

ಮುಂದಿನ ಡಿಸೆಂಬರ್ ತಿಂಗಳೊಳಗಡೆ 24 ಗಂಟೆ ಕುಡಿಯುವ ನೀರನ್ನು ಉಳ್ಳಾಲ ತಾಲೂಕಿನ ಜನತೆಗೆ ಪುರೈಸಲಾಗುವುದು. ಈಗಾಗಲೇ ಪ್ರತಿ ಮನೆಗಳಿಗೆ ಮೀಟರ್ ಅಳವಡಿಸುವ ಕಾರ್ಯ ಆರಂಭಿಸಲಾಗಿದೆ. ಹಾಗೆಯೇ ಪೈಪ್ ಲೈನ್ ಕಾಮಗಾರಿ ಕೈಗೊಳ್ಳುವಾಗ ಹಣ ಪಡೆದುಕೊಂಡಲ್ಲಿ ನೇರವಾಗಿ ದೂರು ನೀಡಿ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಜಲಾಲ್ ಬಾಗ್ ಪಾನೀರು ಸಂಪರ್ಕಿಸುವ ಕಾಂಕ್ರೀಟಿಕೃತ ರಸ್ತೆಯನ್ನು ಉದ್ಘಾಟಿಸಿದರು ಕೋಟೆಕಾರು ಪ.ಪಂ ವ್ಯಾಪ್ತಿಯ ಜಲಾಲ್‌ಬಾಗ್ ನಿಂದ ಪಾನೀರ್ ಸೈಟ್ ಸಂಪರ್ಕಿಸುವ ರಸ್ತೆಗೆ ಬಹಳಷ್ಟು ಬೇಡಿಕೆಯಿತ್ತು. ತೊಕ್ಕೊಟ್ಟು, ದೇರಳಕಟ್ಟೆ, ಮೆಲ್ಕಾರ್, ನಾಟೆಕಲ್ ಸಂಪರ್ಕಿಸುವ ಲಿಂಕ್ ರಸ್ತೆಯೂ ಆಗಿರುವುದರಿಂದ ಹೆಚ್ಚಿನ ಒತ್ತು ನೀಡಿ ಪಟ್ಟಣ ಪಂಚಾಯತ್ ನಲ್ಲಿ ಆಡಳಿತವಿಲ್ಲದ ಸಂದರ್ಭ ತಾನು ವಿಶೇಷ ಅನುದಾನವನ್ನು ಒದಗಿಸಿದ್ದೆನು. ಆದರೆ ಜಾಗದ ತಕರಾರಿನಿಂದ ಕಾಮಗಾರಿ ವಿಳಂಬವಾಯಿತು. ಆದರೆ ಕಣಚೂರು ಮೋನು ಹಾಗೂ ಲವೀನಾ ಕುಟುಂಬಸ್ಥರ ಸಹಕಾರದಿಂದಾಗಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗಿದೆ. ಅಲ್ಲದೆ ಹೆಚ್ಚುವರಿ ರೂ. 3ಲಕ್ಷ ಅನುದಾನವನ್ನು ಪೂರೈಸಲಾಗಿದೆ ಎಂದ ಅವರು ಜಲಾಲ್ ಬಾಗ್ ಪ್ರದೇಶವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗಿದ್ದು, ಮೊದಲ ಹಂತವಾಗಿ ಮಸೀದಿ ಕ್ರಾಸ್, ದ್ವಿತೀಯ ಹಂತವಾಗಿ ಟರ್ನಿಂಗ್ ನಿಂದ ಆರೀಫ್ ಮನೆವರೆಗೆ ಅಭಿವೃದ್ಧಿ ಕಡೇಯದಾಗಿ ರಸ್ತೆಯ ಕೊನೆಯವರೆಗೂ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ.

ಮುಂದಿನ ದಿನಗಳಲ್ಲಿಯೂ ಜಲಾಲ್ ಬಾಗ್ ಪಾನೀರು ವಾರ್ಡಿಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗುವುದು. ಡಿಸೆಂಬರ್ ತಿಂಗಳೊಳಗೆ ಉಳ್ಳಾಲ ತಾಲೂಕಿನ ಉದ್ದಕ್ಕೂ 24 ಗಂಟೆ ಕುಡಿಯುವ ನೀರಿನ ಯೋಜನೆ ಆರಂಭವಾಗುವುದು. ಪ್ರತಿಯೊಂದು ಮನೆಗಳಿಗೂ ಮೀಟರ್ ಅಳವಡಿಕೆ ಮಾಡಲಾಗಿದೆ. ಬಡವರಿಗೂ ಅನುಕೂಲಕರವಾಗುವ ಉದ್ದೇಶದಿಂದ ಮೀಟರ್ ಅಳವಡಿಸಲಾಗಿದ್ದು, ಪೈಪ್ ಲೈನ್ ಫಿಟಿಂಗ್ ಕಾಮಗಾರಿ ಸಂಪೂರ್ಣ ಉಚಿತವಾಗಿದೆ. ಕಾಮಗಾರಿ ನಡೆಸುವವರು ಹಣ ಕೇಳುತ್ತಿರುವ ದೂರು ಕೇಳಿಬಂದಿದೆ ಎಂದರು. ಈ ಸಂದರ್ಭ ಮುಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಕೋಟೆಕಾರ್ ಪ. ಪಂಚಾಯತ್ ಮಾಜಿ ಕೌನ್ಸಿಲರ್ ಡಿ.ಎಮ್ ಮಹಮ್ಮದ್ ,ಕೌನ್ಸಿಲರ್ ಆಯಿಶಾ ಡಿ ಅಬ್ಬಾಸ್, ಜಲಾಲ್ ಬಾಗ್ ಅರಫಾ ಮಸೀದಿ ಅಧ್ಯಕ್ಷ ಹೈದರ್ ಪರ್ತಿಪ್ಪಾಡಿ, ಜಲಾಲ್ ಬಾಗ್ ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಅಲಿ ಹಸನ್, ಸಫಿಯ ಪನೀರ್, ಹಮೀದ್ ಪಜೀರ್, ಹಮೀದ್ ಜಲಾಲ್ ಬಾಗ್, ಸಾಮಾಜಿಕ ಮುಖಂಡ ಇಬ್ರಾಹಿಂ ಕತಾರ್ ಹಾಗೂ ಜಲಾಲ್ ಬಾಗ್ ನಾಗರಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!