ಅಡ್ಯಾರ್ ಪದವು ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶಾಭಿಷೇಕ ಸಂಬಂಧಿ ಕಾರ್ಯಕ್ರಮಗಳು ಜೂನ್ 6ರಿಂದ ಆರಂಭಗೊಳ್ಳಲಿವೆ. ಮಂಗಳೂರಿನಲ್ಲಿ ಈ ವಿಷಯ ತಿಳಿಸಿದ ಬ್ರಹ್ಮ ಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಪುರುಷೋತ್ತಮ ಕೆ. ಭಂಡಾರಿ ಅವರು, ಜೂನ್ 5 ರಂದು ಹಸಿರು ಹೊರೆ ಕಾಣಿಕೆ ಸಲ್ಲಿಕೆ ನಡೆಯಲಿದೆ.

ಜೂನ್ 8 ರವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದೂ ತಿಳಿಸಿದ್ದಾರೆ. ಅನೇಕ ಗಣ್ಯರು ಈ ಸಂದರ್ಭದಲ್ಲಿ ಆಯೋಜನೆಯಾಗಿರುವ ಸಭಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ್ರು.



