ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮುಲ್ಕಿ ತಾಲೂಕು ಶಾಖೆಯ ಶರ್ಲಿ ಸುಮಾಲಿನಿ ಮಾತನಾಡಿ ಕಳೆದ ನಾಲ್ಕು ವರ್ಷಗಳಲ್ಲಿ ಹಳೆಯಂಗಡಿಯ ಪ್ರತಿಷ್ಠಿತ ಪ್ರಿಯದರ್ಶಿನಿ ಕೋ ಆಪರೇಟಿವ್ ಸೊಸೈಟಿ ಉತ್ತಮ ಸಾಧನೆಯಲ್ಲಿ ಮುನ್ನಡೆಯುತ್ತಿದ್ದು ,ಸೊಸೈಟಿಯಲ್ಲಿ ಸವಲತ್ತುಗಳನ್ನು ಸದುಪಯೋಗಪಡೆದುಕೊಂಡು ಅಭಿವೃದ್ಧಿಗೆ ಮಹಿಳೆ ಹಾಗೂ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ಮತ್ತು ಸೇವಾ ಸಂಸ್ಥೆಗಳು ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೊಸೈಟಿ ಎಚ್ ವಸಂತ್ ಬರ್ನಾಡ್ ವಹಿಸಿ ಮಾತನಾಡಿ ಸೊಸೈಟಿ ಮಹಿಳೆಯರ ಸ್ವಾವಲಂಬನೆಗೆ ಹೊತ್ತು ನೀಡುತ್ತಿದ್ದು ಕಳೆದ ವರ್ಷದಲ್ಲಿ 42 ಲಕ್ಷ ಲಾಭದಲ್ಲಿ ಮುನ್ನಡೆಯುತ್ತಿದೆ. ಇದಕ್ಕೆ ಗ್ರಾಹಕರ ಸಹಕಾರ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಹಕಾರದ ಅಗತ್ಯವಿದೆ ಎಂದರು. ವೇದಿಕೆಯಲ್ಲಿ ಕೆಮ್ರಾಲ್ ಪಕ್ಷಿಕೆರೆ ಮಹಿಳಾ ವಿವಿದ್ದೋದ್ದೇಶ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹಿನಿ ಬಿ ರಾವ್, ಸೊಸೈಟಿ ಉಪಾಧ್ಯಕ್ಷೆ ಪ್ರತಿಭಾ ಕುಳಾಯಿ, ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್, ಉಮಾನಾಥ ಜೆ ಶೆಟ್ಟಿಗಾರ್, ಗಣೇಶ್ ಪ್ರಸಾದ್ ದೇವಾಡಿಗ, ಮಿರ್ಜಾ ಅಹ್ಮದ್, ಹರೀಶ್ ಪುತ್ರನ್, ವಿಜಯ ಕುಮಾರ್ ಸನಿಲ್, ಜಯಕೃಷ್ಣ ಕೋಟ್ಯಾನ್, ತನುಜಾ ಶೆಟ್ಟಿ, ನವೀನ್ ಸಾಲ್ಯಾನ್ ಪಂಜ, ಸಂದೀಪ್ ಕುಮಾರ್, ಗೌತಮ್ ಜೈನ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಸ್ವಾಗತಿಸಿದರು, ಶಾಖಾ ಪ್ರಬಂಧಕಿ ಅಕ್ಷತಾ ಶೆಟ್ಟಿ ನಿರೂಪಿಸಿದರು. ಸಿಬ್ಬಂದಿ ನಿರಂಜಲ ನೀತು ಪ್ರಾರ್ಥಿಸಿದರು,ಲಾವಣ್ಯ ಧನ್ಯವಾದ ಅರ್ಪಿಸಿದರು.



