ಸೂಟ್ಕೇಸ್ ನಲ್ಲಿ ಬಾಲಕಿಯ ರುಂಡ ಮತ್ತು ಮುಂಡ ಬೇರ್ಪಡಿಸಿರುವ ಮೃತದೇಹ ಪತ್ತೆಯಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಚಂದಾಪುರ ರೈಲ್ವೆ ಹಳಿ ಬಳಿ ನಡೆದಿದೆ.

ಬಾಲಕಿಯ ಶವವೊಂದು ರುಂಡ-ಮುಂಡ ಕತ್ತರಿಸಿದ ಸ್ಥಿತಿಯಲ್ಲಿ ಮುಚ್ಚಿದ ನೀಲಿ ಸೂಟ್ ಕೇಸೊಂದರಲ್ಲಿ ಪತ್ತೆಯಾದ ಆತಂಕಕಾರಿ ಘಟನೆ ಹಳೇ ಚಂದಾಪುರ ರೈಲ್ವೆ ಹಳಿ ಬಳಿ ನಡೆದಿದೆ. ಬಾಲಕಿಗೆ ಸುಮಾರು ಒಂಬತ್ತು ವರ್ಷ ವಯಸ್ಸಾಗಿದೆ ಎಂದು ತಿಳಿದು ಬಂದಿದೆ.
ಬಾಲಕಿಯ ಚಹರೆ ಇನ್ನಷ್ಟೇ ಪತ್ತೆಯಾಗಬೇಕಿದೆ. ಘಟನೆ ಮಾಹಿತಿ ತಿಳಿದು. ಸ್ಥಳಕ್ಕೆ ಸೂರ್ಯನಗರ ಠಾಣೆ ಪೊಲೀಸರು ಹಾಗೂ ಬಯ್ಯಪ್ಪನಹಳ್ಳಿ ಯಲ್ ಸ್ಟೇಷನ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



