ವಾಯುಭಾರ ಕುಸಿತಕ್ಕೆ ಸುರಿದ ಬಾರಿ ಮಳೆಗೆ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಕಲ್ಲಡ್ಕ ರಸ್ತೆ ಕೆಸರು ಗದ್ದೆಯಾದ ದೃಶ್ಯ ಕಂಡು ಬಂದಿದೆ.

ಅವಧಿಗೆ ಮುನ್ನ ಹಠಾತ್ ಚಂಡಮಾರುತದ ಪರಿಣಾಮ ರಾತ್ರಿಯಿಂದಲೇ ವರುಣನ ಆರ್ಭಟ ಜೋರಾಗಿ ಇತ್ತು. ನಿರಂತರವಾಗಿ ಸುರಿದ ಮಳೆಯ ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ತುಂಬಾ ಹರಿಯುವ ದೃಶ್ಯ ಅಲ್ಲಲ್ಲಿ ಕಂಡು ಬಂತು. 
ಬಿ.ಸಿರೋಡಿನಿಂದ ಅಡ್ಡಹೊಳೆವರೆಗೆ ನಡೆಯುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಮಧ್ಯೆ ಅಲ್ಲಲ್ಲಿ ಬಾಕಿಯಾಗಿದ್ದು, ಮೆಲ್ಕಾರ್ ಸಮೀಪದ ನರಹರಿ ಪರ್ವತದ ಮುಂಭಾಗದ ಕಾಮಗಾರಿ ಒಂದನ್ನು ಹೊರತುಪಡಿಸಿ ಬಿಸಿರೋಡಿನಿಂದ ಕಲ್ಲಡ್ಕವರೆಗೆ ಮೇ ಅಂತ್ಯದಲ್ಲಿ ಸಂಚಾರಕ್ಕೆ ಅವಕಾಶ ನೀಡುವುದಾಗಿ ಗುತ್ತಿಗೆ ವಹಿಸಿಕೊಂಡು ಕಾಮಗಾರಿ ನಡೆಸುತ್ತಿರುವ ಕೆ.ಎನ್.ಆರ್.ಸಿ. ಕಂಪೆನಿಯವರು ತಿಳಿಸಿದ್ರು. ನರಹರಿ ಭಾಗದಲ್ಲಿ ತಡೆಗೋಡೆ ಮತ್ತು ಬಂಡೆಕಲ್ಲು ಹೊಡೆದು ರಸ್ತೆ ನಿರ್ಮಾಣ ಮಾಡುವ ವೇಳೆ ವಿಳಂಭವಾಗಬಹುದು ಹಾಗಾಗಿ ಮಳೆಗಾಲ ಕಡಿಮೆಯಾದ ಬಳಿಕ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ.



