ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಪರಿಸ್ಥಿತಿ ಹೆದಗಟ್ಟಿದೆ. ಗೃಹ ಸಚಿವ ಜಿಯಾವುಲ್ ಹಸನ್ ಲಂಜಾರ್ ಮನೆಗೆ ಬೆಂಕಿ ಹಚ್ಚಲಾಗಿದೆ. ಪ್ರತಿಭಟನೆ ಈಗ ತೀವ್ರ ಸ್ವರೂಪ ಪಡೆದಿದೆ. ಇಬ್ಬರು ಪ್ರತಿಭಟನಾಕಾರರು ಸಾವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನೌಶೆಹ್ರೊ ಫಿರೋಜ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿದ್ದರು. ನೀರಿಗಾಗಿ ಅಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಸಿಂಧೂ ನದಿಯಲ್ಲಿ ಹೊಸ ಕಾಲುವೆಗಳ ನಿರ್ಮಾಣದ ವಿರುದ್ಧ ಸಿಂಧ್ ಸಬಾ ಆಯೋಜಿಸಿದ್ದ ಪ್ರತಿಭಟನೆಯನ್ನು ಚದುರಿಸಲು ಪೊಲೀಸರು ಮಂಗಳವಾರ ಲಾಠಿ ಪ್ರಹಾರ ನಡೆಸಿದಾಗ ಹಿಂಸಾಚಾರ ಭುಗಿಲೆದ್ದಿತ್ತು.ಪ್ರತಿಭಟನಾಕಾರರು ಕೋಪದಲ್ಲಿ ಗೃಹ ಸಚಿವರ ಮನೆಗೆ ಬೆಂಕಿ ಹಚ್ಚಿದ್ದಾರೆ.



