ಮಂಗಳೂರು ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣವು 2024-25ನೇ ಹಣಕಾಸು ವರ್ಷದಲ್ಲಿ ದಾಖಲೆಯ 2.32 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ.

ಇದು 2019-20ರಲ್ಲಿ ಕೋವಿಡ್-19 ಪೂರ್ವದಲ್ಲಿ ನಿರ್ವಹಿಸಿದ ಸಂಖ್ಯೆಗಿAತ 24.10 ಶೇ. ಬೆಳವಣಿಗೆ ಕಂಡಿರುವುದು ಸೂಚಿಸುತ್ತದೆ. 2023-24ನೇ ಹಣಕಾಸು ವರ್ಷಕ್ಕಿಂತ 2024-25ನೇ ಹಣಕಾಸು ವರ್ಷದಲ್ಲಿ 15.34 ಶೇ. ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಿಸಲಾಗಿದೆ 2025, ಏಪ್ರಿಲ್ 12 ರಂದು ದಿನವೊಂದರಲ್ಲೇ ಗರಿಷ್ಠ 8,103 ಪ್ರಯಾಣಿಕರನ್ನು ನಿರ್ವಹಿಸಿದ ದಿನವಾಗಿದೆ.

ವಾಸ್ತವದಲ್ಲಿ ವಿಮಾನ ನಿಲ್ದಾಣವು 2024-25ರಲ್ಲಿ ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 3.09 ಲಕ್ಷ ಹೆಚ್ಚಿನ ಪ್ರಯಾಣಿಕರನ್ನು ನಿರ್ವಹಿಸಿದೆ. ವಿಮಾನ ನಿಲ್ದಾಣವು 2024- 25 ನೇ ಹಣಕಾಸು ವರ್ಷದಲ್ಲಿ 3,864.1 ಮೆಟ್ರಿಕ್ ಟನ್ ದೇಶೀಯ ಸರಕುಗಳನ್ನು ನಿರ್ವಹಿಸಿದೆ. ಇದರಲ್ಲಿ 2025, ಮಾರ್ಚ್ 31 ತನಕ 1,346 27 ಟನ್ ಹೊರಹೋಗುವ ಮತ್ತು 0.79 ಮೆಟ್ರಿಕ್ ಟನ್‌ಒಳಬರುವ ಸರಕು ಸೇರಿದೆ.



