ಹಿರಿಯ ಕಾಂಗ್ರೆಸ್ ಮುಖಂಡರು, ಮಾಜಿ ಕೇಂದ್ರ ಸಚಿವರಾದ ಬಿ.ಜನಾರ್ದನ ಪೂಜಾರಿಯವರ ಮನೆಗೆ ಕರ್ನಾಟಕ ವಿಧಾನಪರಿಷತ್‌ನ ಮುಖ್ಯ ಸಚೇತಕರಾದ ಸಲಿಂ ಅಹ್ಮದ್ ಭೇಟಿ ನೀಡಿ, ಹಿರಿಯ ನಾಯಕರ ಯೋಗ ಕ್ಷೇಮ ವಿಚಾರಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಖಾಸಗಿ ಕಾರ್ಯಕ್ರಮದ ಪ್ರಯುಕ್ತ ನಾನು ಜಿಲ್ಲೆಗೆ ಬಂದಿದ್ದು, ಆ ಸಂದರ್ಭದಲ್ಲಿ ಶ್ರೀಮಾನ್ ಪೂಜಾರಿಯವರನ್ನು ಭೇಟಿ ಮಾಡಬೇಕೆಂದು ನಿಶ್ಚಯಿಸಿದ್ದೆ. ಹಾಗೆಯೇ ಅವರ ಬಂಟ್ವಾಳದಲ್ಲಿರುವ ಮನೆಗೆ ಭೇಟಿ ನೀಡಿ ಅವರ ಆಶಿರ್ವಾದ ಪಡೆದಿದ್ದೇನೆ. ಅದೇ ರೀತಿ ಮಂಗಳೂರಿನಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಯುವ ಕಾಂಗ್ರೆಸ್ ವತಿಯಿಂದ ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದೇನೆ ಎಂದ್ರು.



