ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ಸಾಹಿತ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ. ಇದರ ವತಿಯಿಂದ ನಡೆಯುವ ಅಮೃತ ಪ್ರಕಾಶ 44ನೇ ಸರಣಿ ಕೃತಿ ಶ್ರೀಮತಿ ವಜ್ರ ರಾವ್ ಅವರ ಲೇಖನ ಸಂಕಲನ ಮರೆಯದ ಮಾತುಗಳು ಕೃತಿ ಬಿಡುಗಡೆ ಕಾರ್ಯಕ್ರಮ ಮಂಗಳೂರಿನ ಪತ್ರಿಕಾ ಭವನದಲ್ಲಿ ಮೇ 27ರಂದು ಮಂಗಳವಾರ ಸಮಯ 10.30ಕ್ಕೆ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರು ಹಾಗೂ ಲೇಖಕರು ಹರಿಕಥಾ ಪರಿಷತ್ (ರಿ), ಮಂಗಳೂರು ಇದರ ಅಧ್ಯಕ್ಷರಾದ ಮಹಾಬಲ ಶೆಟ್ಟಿ ವಹಿಸುವರು. ಲೇಖಕರು ಹಾಗೂ ಐಸಿಎಐ ಮಂಗಳೂರು ಇದರ ಮಾಜಿ ಚೇಯರ್‌ಮಾನ್ ಎಸ್.ಎಸ್. ನಾಯಕ್ ಇವರು ಮರೆಯದ ಮಾತುಗಳು ಕೃತಿ ಬಿಡುಗಡೆಗೊಳಿಸುವರು. ಕೃತಿಯ ಲೇಖಕಿ ಶ್ರೀಮತಿ ವಜ್ರಾ ರಾವ್, ಅಮೃತ ಪ್ರಕಾಶ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಕವಿಯತ್ರಿ ಶಿಕ್ಷಕಿ ಸುರೇಖಾ ಯಾಳವಾರ ಉಪಸ್ಥಿತರಿರುವರು. ಡಾ. ಮಾಲತಿ ಶೆಟ್ಟಿ ಮಾಣೂರು ಸ್ವಾಗತಿಸುವರು. ಸುರೇಖಾ ಯಾಳವಾರ ಕಾರ್ಯಕ್ರಮ ನಿರೂಪಿಸುವರು.



