ಮಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ತಿಂಗಳ ಮಂಗಳೂರು ಪ್ರೆಸ್‌ಕ್ಲಬ್ ಗೌರವ ಅತಿಥಿ ಸನ್ಮಾನವನ್ನು ತುಳು ರಂಗ ಭೂಮಿ ಕಲಾವಿದ ಮತ್ತು ಚಲನಚಿತ್ರ ನಟರಾದ ನವೀನ್ ಡಿ ಪಡೀಲ್ ಇವರನ್ನು ನಗರದ ಪತ್ರಿಕಾಭವನದಲ್ಲಿ ಗೌರವಿಸಲಾಯಿತ್ತು. 
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತುಳು ಚಿತ್ರ ರಂಗ ಕೇವಲ ಹಾಸ್ಯಕ್ಕೆ ಮಾತ್ರ ಸೀಮಿತವಾಗಬಾರದು. ಬದಲಾಗಿ ಉತ್ತಮ ಸಂದೇಶವನ್ನು ನೀಡುವ ಸಿನೆಮಾಗಳಿಗೆ ಒತ್ತನ್ನು ನೀಡಬೇಕು. ಉತ್ತಮ ಕಥೆಯನ್ನು ಕಟ್ಟುವ, ನಿರ್ದೇಶನ ಮಾಡುವ, ನಟನೆ ಮಾಡುವ ಕಲಾವಿದರು ಇದ್ದಾರೆ. ಅಂಥವರನ್ನು ನಾವು ಪ್ರೋತ್ಸಹಿಸಿಬೇಕು. ಸಾಮಾಜಿಕ ಸಾಮರಸ್ಯವನ್ನು ತಿಳಿಸುವ, ಶಾಂತಿ ಸೌಹಾರ್ದತೆಯ ಅರಿವನ್ನು ಹೇಳುವ, ಸಮಾಜವನ್ನು ಹೊಂದಾಣಿಕೆಯಿ0ದ ಕೊಂಡುಹೋಗುವ ಸಿನೆಮಾಗಳು ಈ ಭಾಗದಲ್ಲಿ ತೆರೆ ಕಾಣುವ ಅಗತ್ಯವಿದೆ. ಕರಾವಳಿಯ ಸರ್ವ ಧರ್ಮದ ಜನರು ತುಳು ಸಿನೆಮಾವನ್ನು ನೋಡಬೇಕು. ಆದ್ರೆ ಮಾತ್ರ ತುಳು ಸಿನೆಮಾ ಗೆಲ್ಲುತ್ತೆ ಎಂದಿದ್ದಾರೆ.

ಇನ್ನು ಈ ಕಾರ್ಯಕ್ರಮದಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಇದರ ಅಧ್ಯಕ್ಷರಾದ ಪಿ. ಬಿ. ಹರೀಶ್ ರೈ, ವಹಿಸಿದ್ರು. ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ, ಜಿತೇಂದ್ರ ಕುಂದೇಶ್ವರ, ಇಬ್ರಾಹಿಂ ಅಡ್ಕಸ್ಥಳ, ಭಾಸ್ಕರ್ ರೈ ಕಟ್ಟಾ ಉಪಸ್ಥಿತರಿದ್ರು.



