ಬಂಟ್ವಾಳದ ತಾಲೂಕಿನಲ್ಲಿ ಹಿಂದುತ್ವವಾದಿಗಳಿ0ದ ಕೊಲೆಯಾದ ಅಬ್ದುಲ್ ರಹ್ಮಾನ್ ಮತ್ತು ಹಲ್ಲೆಗೊಳಗದ ಖಲಂದರ್ ಘಟನೆಯನ್ನು ನೋಡಿದಾಗ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲಗೊಂಡಿದೆ. ಪೊಲೀಸ್ ಇಲಾಖೆಯ ವೈಫಲ್ಯ ನೇರವಾಗಿ ಕಂಡು ಬಂದಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ರಾಷ್ಟ್ರಪತಿ ಆಳ್ವಿಕೆ ತರುವಂತೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಅಧ್ಯಕ್ಷ ಅಶ್ರಫ್ ಕಲ್ಲೇಗ ಒತ್ತಾಯಿಸಿದ್ದಾರೆ.
ಇವರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗಷ್ಟೆ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆಯಾದ ಬಳಿಕ ಅನೇಕ ಕಡೆ ನಡೆದ ಅವರ ಸಂತಾಪ ಸಭೆಯಲ್ಲಿ ಪ್ರತಿಕಾರದ ಭಾಷಣವನ್ನು ನೇರವಾಗಿ ಹಿಂದುತ್ವವಾದಿಗಳು ಮಾಡಿದ್ದಾರೆ. ಪುತ್ತೂರಿನಲ್ಲಿ ಭರತ್ ಕುಮ್ಮೇಲು, ಬಜ್ಜೆಯಲ್ಲಿ ಶ್ರೀಕಾಂತ್ ಶೆಟ್ಟಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ. ಆದರೆ ಪೊಲೀಸರು ಅವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಸರಕಾರವೂ ಕೂಡಾ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಗೃಹಸಚಿವರಿಗೆ ಪೊಲೀಸ್ ಇಲಾಖೆಯನ್ನು ಕಂಟ್ರೋಲ್ ಮಾಡುವ ಕ್ಯಾಪಸೀಟಿ ಇಲ್ಲ. ಅತಿಥಿ ಉಪನ್ಯಾಸಕರಂತೆ ಇರುವ ಉಸ್ತುವಾರಿ ಸಚಿವರಿಂದಾಗಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಹಾಗಾಗಿ ನೈಜ ಹಿಂದುಗಳಿಗೆ, ಅಲ್ಪಸಂಖ್ಯಾತರಿಗೆ ರಸ್ತೆಯಲ್ಲಿ ನಡೆದಾಡಲು ಭಯದ ವಾತಾವರಣ ಸೃಷ್ಟಿಯಾಗಿದೆ. ಎಜೇಂಸ್ಟ್ಮೆ0ಟ್ ರಾಜಕಾರಣ ಮಾಡಿಕೊಂಡು ಬರುತ್ತಿರುವ ಸ್ಪೀಕರ್ ಸಾಹೇಬರಿಂದಾಗಿ ಇವತ್ತು ಜಿಲ್ಲೆಯಲ್ಲಿ ಕೊಲೆಯಂತ ಘಟನೆಗಳು ನಡೆಯುತ್ತಿದೆ. ಜಿಲ್ಲೆಯಲ್ಲಿ ಯಾವುದೇ ಘಟನೆ ನಡೆದರೂ ಕೂಡಾ ಗಡಿಬಿಡಿ ಆಕಂಡ ಅನ್ನುವರು ಅವರು ಅವರ ಹತ್ತಿರದ ಕ್ಷೇತ್ರದ ವ್ಯಕ್ತಿಯ ಹತ್ಯೆಯಾಗಿದೆ. ನಿಮ್ಮಲ್ಲಿ ಅಧಿಕಾರ ಇದೆ. ಸರಕಾರ ಇದೆ. ಈ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದಕ್ಕಾಗಿ ನಿಮ್ಮ ಕೊಡುಗೆ ಏನು ಎಂದು ಅಶ್ರಫ್ ಕಲ್ಲೇಗ ಅವರು ಪ್ರಶ್ನಿಸಿದ್ದಾರೆ. ಇನ್ನು ಈ ಸುದ್ದಿಗೋಷ್ಠಿಯಲ್ಲಿ ಮೋನು ಬಪ್ಪಳಿಗೆ, ರಶೀದ್ ಪರ್ಲಡ್ಕ ಉಪಸ್ಥಿತರಿದ್ರು.



