ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಮೋಟೆಪದವು ಸಮೀಪದ ಮಹಿಳೆಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸೊಂಟಕ್ಕೆ ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ಶವ ಸಿಕ್ಕಿರುವುದರಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸಕಲೇಶಪುರ ಮೂಲದ ಸುಂದರಿ (35) ಎಂಬವರ ಮೃತದೇಹ ಇದಾಗಿದ್ದು ಕಳೆದ ಒಂದೂವರೇ ವರ್ಷಗಳಿಂದ ಮನೆ ಮನೆ ಕೆಲಸಕ್ಕೆ ತೆರಳಿ ಜೀವನ ನಿರ್ವಹಿಸುತ್ತಿದ್ದವರು ಎಂದು ತಿಳಿದುಬಂದಿದೆ. ಈಕೆ ಮನೆಯಲ್ಲಿ ಒಂಟಿಯಾಗಿದ್ದರು. ಇದೀಗ ಆಕೆಯ ಮೃತದೇಹ ಪತ್ತೆಯಾಗಿರುವುದರಿಂದ ವಾರದ ಹಿಂದೆಯೇ ಕೊಲೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೀಗ ಪೊಲೀಸರು ಕೊಣಾಜೆ ಪೋಲೀಸರು ಸ್ಥಳದಲ್ಲಿ ತನಿಖೆ ಆರಂಭಿಸಿದ್ದಾರೆ.



