ಜನ ಮನದ ನಾಡಿ ಮಿಡಿತ

Advertisement

ಉಳ್ಳಾಲ: ದೇರಳಕಟ್ಟೆ ಮನೆ ಮೇಲೆ ಗುಡ್ಡ ಕುಸಿದು ಮಗು ಸಾವು..!

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಗೆ ಮಗು ಮೃತಪಟ್ಟ ಘಟನೆ ಬೆಳ್ಳಗ್ರಾಮದ ಕಾನಕರೆ ಎಂಬಲ್ಲಿ ನಡೆದಿದೆ. ಮೃತ ಮಗುವನ್ನು ನೌಶಾದ್‌ರ ಪುತ್ರಿ ನಯೀಮ ಎಂದು ಗುರುತಿಸಲಾಗಿದೆ. ಕಾನಕರೆಯಲ್ಲಿರುವ ನೌಶಾದ್ ಅವರ ಮನೆಗೆ ಹಿಂಬದಿಯ ಗುಡ್ಡೆ, ತಡೆಗೋಡೆ ಕುಸಿದು ಬಿದ್ದಿದ್ದು, ಮನೆಯ ಕೊಠಡಿಯ ಕಿಟಕಿ ಮಗುವಿನ ಮೇಲೆ ಬಿದ್ದು ಈ ದುರಂತ ಸಂಭವಿಸಿದೆ.

ಮೊಂಟೆ ಪದವುನಲ್ಲಿ ಗುಡ್ಡ ಜರಿದು ಮೂವರು ಮಣ್ಣಿನಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಇದ್ದು, ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕುಂಪಲ, ಕಲ್ಲಾಪು, ಧರ್ಮ ನಗರ, ಉಚ್ಚಿಲ, ತಲಪಾಡಿ, ವಿದ್ಯಾನಗರ, ಕಲ್ಕಟ್ಟ ಮುಂತಾದ ಕಡೆಗಳಲ್ಲಿ ಹಲವು ಮನೆಗಳು ಜಲಾವೃತಗೊಂಡಿದ್ದು, ಮನೆಯೊಳಗೆ ನೀರು ನುಗ್ಗಿದೆ. ಬಹಳಷ್ಟು ಕುಟುಂಬಗಳು ರಾತ್ರಿ ವೇಳೆ ಬೇರೆಡೆ ಸ್ಥಳಾಂತರಗೊ0ಡಿದೆ. ಕಲ್ಲಾಪುವಿನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ತಲಪಾಡಿ ಯಲ್ಲಿ ಒಂದು ಮನೆಗೆ ನೀರು ನುಗ್ಗಿ ಹಾನಿಯಾಗಿದೆ.

ಈ ಕುಟುಂಬವನ್ನು ರಾತ್ರಿ ವೇಳೆ ಸ್ಥಳಾಂತರ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ತಾಲೂಕು ತಹಶೀಲ್ದಾರ್ ಪುಟ್ಟರಾಜು, ಕಂದಾಯ ನಿರೀಕ್ಷಕ ಪ್ರಮೋದ್, ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಡಿ, ಗ್ರಾಮಕರಣಿಕ ಸುರೇಶ್ ಮತ್ತಿತರರು ರಾತ್ರಿ ವೇಳೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

ಮುಲ್ಕಿ: ಮುಲ್ಕಿ ಬಸ್ ನಿಲ್ದಾಣದ ಬಳಿ ಬಸ್-ಕಾರು ಡಿಕ್ಕಿ; ಮಕ್ಕಳಿದ್ದ ಕಾರು ಅಪಾಯದಿಂದ ಪಾರು

ನ್ಯೂಯಾರ್ಕ್: ಅಮೆರಿಕ-ಇರಾನ್ ಮಿಲಿಟರಿ ವಿರಾಮದ ಪರಿಣಾಮ; ಕಚ್ಚಾ ತೈಲ ಬೆಲೆ ಇಳಿಕೆ, ಹಣದುಬ್ಬರಕ್ಕೂ ಬ್ರೇಕ್?

ನವದೆಹಲಿ: ಜಿರಳೆ ಹೋರಾಟಕ್ಕೆ ಕೊನೆಗೂ ಮಣಿದ ಕೇಂದ್ರ ಸರಕಾರ; ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜಿನಾಮೆ…!

ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ಭೀಕರ ದಾಳಿ…!

ಬಂಟ್ವಾಳ: ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಆರೋಗ್ಯದಲ್ಲಿ ಸುಧಾರಣೆ..!

ಬಂಟ್ವಾಳ: ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರಲ್ಲಿ ಆತಂಕ..!

ಮಂಗಳೂರು: ಮಂತ್ರಾಲಯದ ಬಳಿ ಭೀಕರ ಅಪಘಾತ; ಯಕ್ಷಧ್ರುವ ಪಟ್ಲ ಫೌಂಡೇಷನ್ ಕಾರ್ಯದರ್ಶಿ ರವಿ ಶೆಟ್ಟಿ ನಿಧನ…!

ಬಂಟ್ವಾಳ: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ಅಗ್ನಿ ಅವಘಡ…..!

ಬಂಟ್ವಾಳ: ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ಅಪ*ಘಾತ; ಮಾನವೀಯತೆ ಮೆರೆದ ಎಸ್‌ಐ ರಾಮಕೃಷ್ಣ..!

error: Content is protected !!