ಸಮುದಾಯಕ್ಕಾದ ಅನ್ಯಾಯವನ್ನು ಪ್ರಶ್ನಿಸಿ ಪಕ್ಷದ ಹುದ್ದೆಗೆ ನೀಡಿದ ರಾಜೀನಾಮೆಗೆ ಪಕ್ಷದಿಂದ ನೀಡಲಾದ ಶೋಕಾಸ್ ನೋಟಿಸು ಹಿಂಪಡೆಯಬೇಕೆAದು ಕಡಬ ಅಲ್ಪ ಸಂಖ್ಯಾತ ಮುಖಂಡ ಅಶ್ರಫ್ ಶೇಡಿಗುಂಡಿ ಆಗ್ರಹಿಸಿದ್ದಾರೆ. ಅವರು ಕಡಬದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತಾವು ಪ್ರತಿನಿಧಿಸುವ ಸಮುದಾಯಕ್ಕೆ ನೋವಾದಾಗ ಸಮುದಾಯ ನಿರಂತರ ಅನ್ಯಾಯಕ್ಕೊಳಗಾದ ಆ ಸಮುದಾಯದ ನಾಯಕರಾಗಿ ನೋವನ್ನು ವ್ಯಕ್ತಪಡಿಸುವುದು, ಆಗಿರುವ ಅನ್ಯಾಯಕ್ಕೆ ನ್ಯಾಯವನ್ನು ಕೇಳುವುದು, ನಾಯಕನಾದವನ ಸಹಜ ನಡೆಯಾಗಿದೆ.

ಈ ನಿಟ್ಟಿನಲ್ಲಿ ಅಮಾಯಕ ಊರಿನಲ್ಲಿ ಎಲ್ಲಾ ಧರ್ಮದವರೊಂದಿಗೆ ಅನ್ಯೋನ್ಯತೆಯಿಂದಿದ್ದ ಒಂದೇ ಒಂದು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದ ನಿಷ್ಕಳಂಕ ವ್ಯಕ್ತಿತ್ವದ ಒಬ್ಬ ಯುವಕನ್ನು ಕಗ್ಗೊಲೆ ನಡೆಸಿದ ಬಗ್ಗೆ ನ್ಯಾಯ ಕೇಳಲು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಕೆ.ಕೆ ಶಾಹುಲ್ ಹಮೀದ್ ಮತ್ತು ಉಪಾಧ್ಯಕ್ಷ ಕೆ. ಅಶ್ರಫ್ ನೇತೃತ್ವದಲ್ಲಿ ಪಕ್ಷದ ಅಲ್ಪಸಂಖ್ಯಾತ ಮುಖಂಡರು ಸಭೆ ಕರೆದಿದ್ರು. ಇದು ಸಹಜ ಪ್ರಕ್ರಿಯೆ ಇದ್ಯಾವುದೂ ಪಕ್ಷದ ಮೇಲಿನ ದ್ವೇಷದಿಂದಲ್ಲ, ಬದಲಾಗಿ ಪಕ್ಷದ ಅಸ್ತಿತ್ವ ಉಳಿಸಲು ಸರಕಾರವನ್ನು ಎಚ್ಚರಿಸಲು ಹಾಗೂ ತಮ್ಮ ನೋವನ್ನು ತೋರಿಸಲು ಸಾಮೂಹಿಕ ರಾಜೀನಾಮೆ ಅನಿವಾರ್ಯವಾಗಿತ್ತು. ಆದರೆ ಅಂತಹ ನಾಯಕರಿಗೆ ಪಕ್ಷದ ವತಿಯಿಂದ ಶೋಕಾಸ್ ನೋಟೀಸು ಜಾರಿ ಮಾಡಿ, ಶಿಸ್ತು ಕ್ರಮದ ಎಚ್ಚರಿಕೆ ಸರಿಯಲ್ಲ, ತಕ್ಷಣ ಶೋಕಾಸ್ ನೋಟೀಸು ಹಿಂಪಡೆದು ನ್ಯಾಯ ಒದಗಿಸಬೇಕಾಗಿ ಕಡಬ ಬ್ಲಾಕ್ ಅಲ್ಪಸಂಖ್ಯಾತ ಮುಖಂಡರು ಆಗ್ರಹಿಸಿದ್ದಾರೆ.



