ಚಾಲಕ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಫುಟ್ ಬಾತ್ ಮೇಲೇರಿ ನಿಂತ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಎಚ್ ಎಂಟಿ ಗ್ಯಾರೇಜ್ ಬಳಿ ಸಂಭವಿಸಿದೆ. ಕರಾವಳಿ ಬೈಪಾಸ್ ನಿಂತ ಉಡುಪಿ ಸಿಟಿ ಕಡೆಗೆ ಬರುತ್ತಿದ್ದ ಕಿಯಾ ಕಾರು ಅಪಘಾತಕ್ಕೀಡಾಗಿದೆ.

ಅದೃಷ್ಟವಶಾತ್ ಕಾರಿನಲ್ಲಿ ನಾಲ್ವರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಉಡುಪಿ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
								
 
															


