ಹೆಚ್ಚುವರಿ ಸಿವಿಲ್ ಮತ್ತುಜೆ.ಎಮ್ ಎಫ್.ಸಿ.ನ್ಯಾಯಾಲದಲ್ಲಿ ನ್ಯಾಯಾಧೀಶರಾಗಿದ್ದ ಕೃಷ್ಣಮೂರ್ತಿ ಎನ್.ಅವರನ್ನು ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು,ಮೂವರು ನ್ಯಾಯಾಧೀಶರನ್ನು ವಕೀಲರ ಸಂಘ (ರಿ), ಬಂಟ್ವಾಳದ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಕೀಲರ ಸಂಘದ ಕಛೇರಿಯಲ್ಲಿ ಸ್ವಾಗತ ಮಾಡಲಾಯಿತು.

ಸೀನಿಯರ್ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಅನಿಲ್ ಪ್ರಕಾಶ್ ಎಂ.ಪಿ ಮಾತನಾಡಿ ಕೋರ್ಟ್ನಲ್ಲಿ ಇರುವ ಹೆಚ್ಚು ಹೆಚ್ಚು ಪ್ರಕರಣಗಳು ಆದಷ್ಟು ಶೀಘ್ರವಾಗಿ ಇತ್ಯರ್ಥವಾಗಬೇಕು ಇದಕ್ಕೆ ಎಲ್ಲಾ ವಕೀಲರ ಸಹಕಾರ ಬೇಕು ಮತ್ತು ಸಹೋದರ ನ್ಯಾಯಾಧೀಶರಿಗೂ ಸಹಕಾರ ನೀಡಬೇಕು ಎಂದು ಎಂದು ತಿಳಿಸಿದ್ದಾರೆ. ವಕೀಲರ ಸಂಘ(ರಿ), ಬಂಟ್ವಾಳ ದ ಅಧ್ಯಕ್ಷರಾದ ರಿಚರ್ಡ್ ಕೊಸ್ತಾ ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನ್ಯಾಯಾಧೀಶರು ಮತ್ತು ವಕೀಲರು ರಥದ ಎರಡು ಚಕ್ರಗಳಿದ್ದಂತೆ. ವಕೀಲರ ಸಂಘ ದ ಸಂಪೂರ್ಣ ಸಹಕಾರ ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
 
								
 
															


