ಶಿಕ್ಷಣ ಸಂಸ್ಥೆಯೊಂದರ ಹೆಸರಿನಲ್ಲಿ ಕೃಷಿ ಜಾಗಗಳಿಗೆ ಅವೈಜ್ಞಾನಿಕವಾಗಿ ಮಣ್ಣು, ತುಂಬಿಸಿ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಲು ಪ್ರಯತ್ನಿಸುತ್ತಿರುವ ಆರೋಪ ಕೇಳಿಬಂದಿದೆ.

ಹೀಗಾಗಿ ಸಾರ್ವಜನಿಕರು ಈ ಜಮೀನಿಗೆ ಸಂಬಂಧಿಸಿದಂತೆ ವ್ಯಕ್ತಿಯೋರ್ವರ ವಿರುದ್ದ ಕ್ರಮಕ್ಕೆ ಪುರಸಭೆ ಕಚೇರಿ ಮುಖ್ಯಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪುರಸಭೆ ಕಚೇರಿ ಮುಖ್ಯಅಧಿಕಾರಿಗಳಿಗೆ ದೂರು ನೀಡಿ, ಕ್ರಮ ಕೈಗೊಳ್ಳಲು ಮನವಿ ಮಾಡಿದ ಸಾರ್ವಜನಿಕರು, ಭಂಡಾರಿಬೆಟ್ಟು-ಪರಿಸರದಿ0ದ ಬಂಟ್ವಾಳ ಪೇಟೆ ಮುಖ್ಯ ರಸ್ತೆಗೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಸಂಪರ್ಕಿಸುವ ಬಿ.ಮೂಡ ಗ್ರಾಮದ ಸ.ನಂ೩ ರ ಹಿಪ್ಪೆಗಳಲ್ಲಿ ಹಾದು ಬಂದು ಸ.ನಂ.೩/೭ ರ ಮುಖಾ-ಎಸ್.ವಿ.ಎಸ್ ಟೆಂಪಲ್ ಶಾಲೆಗೆ ಸಂಪರ್ಕಿಸುವ ರಸ್ತೆಗೆ ಸಂಪರ್ಕಿಸಿ ಅಲ್ಲಿಂದ ಬಂಟ್ವಾಳ ಮುಖ್ಯ ಪೇಟೆಗೆ ತಲುಪುವುದಾಗಿದೆ.

ಈ ಸಂಪರ್ಕ ರಸ್ತೆಯನ್ನು ಬಂಟ್ವಾಳ ಮುಖ್ಯ ಪೇಟೆಗೆ ತಲುಪಲು ಅನಾದಿ ಕಾಲದಿಂದ ಹಿರಿಯರು ತದ ನಂತರದಲ್ಲಿ ನಾವುಗಳು ಉಪಯೋಗಿಸಿಕೊಂಡು ಬರುತ್ತಿರುವುದಾಗಿದೆ. ಭಂಡಾರಿಬೆಟ್ಟು ಪರಿಸರದ ಸಾರ್ವಜನಿಕರು ಶಾಲಾ ಮಕ್ಕಳು ಪೇಟೆಗೆ ಹೋಗಿ ಬರಲು ಇರುವ ಏಕೈಕ ರಸ್ತೆ ಇದಾಗಿದೆ. ವ್ಯವಹಾರಿಕವಾಗಿ ಲಾಭಗಳಿಸುವ ದುರುದ್ದೇಶದಿಂದ ಅಭಿವೃದ್ಧಿ ಪಡಿಸುವ ಜವಾಬ್ದಾರಿ ತೆಗೆದುಕೊಂಡಿರುವ ವ್ಯಕ್ತಿ ಅನಧಿಕೃತವಾಗಿ ಎಲ್ಲೆಂದರಲ್ಲಿ ಕೃಷಿ -ಮಣ್ಣು ತುಂಬಿಸಿ ಮಳೆ ನೀರು ತೋಡುಗಳನ್ನು ಮುಚ್ಚಿರುತ್ತಾರೆ. ನಾವುಗಳು ದಿನನಿತ್ಯ ಪೇಟೆ ಪರಿಸರಕ್ಕೆ ಸಂಪರ್ಕಿಸಲು ಉಪಯೋಗಿಸಿಕೊಂಡು ಬರುತ್ತಿರುವ ಸಾರ್ವಜನಿಕ ಮಾರ್ಗವನ್ನು ಬಂದ್ ಮಾಡಲು ಮಣ್ಣು ಹಾಕಲು ಪ್ರಯತ್ನಿಸುತ್ತಿದ್ದು, ಹೀಗಾಗಿ ರಸ್ತೆ ಬಂದು ಮಾಡಿದಂತೆ ತಡೆಗಟ್ಟಬೇಕಾಗಿ ಸಾರ್ವಜನಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
 
								



