ಪ್ರಚೋದನಕಾರಿ ಭಾಷಣ ಕೇಸ್‌ನಲ್ಲಿ ಭಜರಂಗದಳ ಮುಖಂಡ ಭರತ್ ಕುಮ್ಡೇಲುಗೆ ಹೈಕೋರ್ಟ್ ಬಿಗ್ ರಿಲೀಫ್ ಕೊಟ್ಟಿದೆ. ಭಜರಂಗದಳ ಪುತ್ತೂರು ಸಂಚಾಲಕ ಭರತ್ ಕುಮ್ಡೇಲು ವಿರುದ್ದ ಬಂಧನ ಸಹಿತ ಯಾವುದೇ ಒತ್ತಡದ ಕ್ರಮ ಕೈಗೊಳ್ಳದಂತೆ ಆದೇಶ ಆಗಿದೆ. ಭರತ್ ಕುಮ್ಡೇಲು ಪೊಲೀಸರ ವಿಚಾರಣೆಗೆ ಸಹಕರಿಸುವಂತೆ ಸೂಚನೆ ನೀಡಲಾಗಿದೆ.

ಹೈಕೋಟ್ ನ ನ್ಯಾಯಾಮೂರ್ತಿ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಆದೇಶ ನೀಡಿದೆ. ಮೇ.15 ರಂದು ಪುತ್ತೂರು ಜೈನ ಭವನದಲ್ಲಿ ವಿಎಚ್‌ಪಿ ಆಯೋಜಿಸಿದ್ದ ಕಾರ್ಯಕ್ರಮವಾದ ಸುಹಾಸ್ ಶೆಟ್ಟಿ ಶ್ರದ್ದಾಂಜಲಿ ಸಭೆಯಲ್ಲಿ ಭಾಷಣ ಮಾಡಿದ್ದ ಭಜರಂಗಳದ ಮುಖಂಡ ಭರತ್ ಕುಮ್ಡೇಲು ಅವರ ಮೇಲೆ ಪುತ್ತೂರು ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದೀಗ ಭರತ್ ಪರ ಹಿರಿಯ ನ್ಯಾಯವಾದಿ ಅರುಣ್ ಶ್ಯಾಮ್ ವಾದ ಮಂಡಿಸಿದ್ದು, ಬಿಗ್ ರಿಲೀಫ್ ಸಿಕ್ಕಿದೆ.



