ಧರ್ಮಸ್ಥಳ ಸಮೀಪ ಬೀಕರ ಅತ್ಯಾಚಾರ ಹಾಗೂ ಕೊಲೆಗೀಡಾದ ಪ್ರಕರಣ 11 ವರ್ಷಗಳ ಬಳಿಕ ಬಾರಿ ಸದ್ದಾಗುತ್ತಿದೆ. ಈ ಘಟನೆಯನ್ನು ಆಧರಿಸಿ ಸಿನಿಮಾ ಮಾಡೋಕೆ ಸ್ಯಾಂಡಲ್ವುಡ್ ನಲ್ಲಿ ತಯಾರಿ ಆಗುತ್ತಿದೆ ಅನ್ನುವ ಮಾಹಿತಿ ಹೊರ ಬಿದ್ದಿರುವ ಬೆನ್ನಲ್ಲಿ ಆ ಸಿನಿಮಾವನ್ನು ಮಾಡುವುದಕ್ಕೆ ಸೌಜನ್ಯ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದ. ಈ ಬಗ್ಗೆ ಪ್ರತಿಕ್ರಿಯಿಸಿದ ಸೌಜನ್ಯ ಮಾವ ವಿಠಲ ಗೌಡ ನಮ್ಮ ಒಪ್ಪಿಗೆ ಇಲ್ಲದೆ ಆ ಸಿನಿಮಾವನ್ನು ಹೇಗೆ ಮಾಡುತ್ತಾರೆ ನಮ್ಮನ್ನು ದಾರಿ ತಪ್ಪಿಸುವ ಸಲುವಾಗಿ ಸಿನೆಮಾ ಮಾಡಲಾಗುತ್ತಿದೆ. ಕಥೆ ಏನು ಮಾಡಿದ್ದಾರೆ ಅನ್ನುವುದೇ ನಮಗೆ ಗೊತ್ತಿಲ್ಲ. ಯಾರಾದರೂ ಸಿನಿಮಾ ಮಾಡುವುದಕ್ಕೆ ಮುಂದಾದರೆ ಹೈಕೋರ್ಟ್ ನಿಂದ ಸ್ಟೇ ತರುತ್ತೇವೆ ಎಂದು ತಿಳಿಸಿದ್ದಾರೆ.



