ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದು ,ಇದೀಗ ಕೃಷಿಕರು ತಮ್ಮ ಹಣಕ್ಕಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಇಂದು ಸುಮಾರು 50 ಕ್ಕೂ ಅಧಿಕ ಕೃಷಿಕರು ಬಂಟ್ವಾಳ ನಗರ ಪೋಲೀಸ್ ಠಾಣೆಯ ಮುಂದೆ ಜಮಾಯಿಸಿದ್ದು, ಪ್ರತಿಯೊಬ್ಬರು ಕೂಡ ಅಡಿಕೆ ವ್ಯಾಪಾರಿ ಬಂಟ್ವಾಳ ಬಡ್ಡಕಟ್ಟೆಯಲ್ಲಿ ಎ.ಬಿ.ಸುಫಾರಿ ಅಂಗಡಿಯನ್ನು ಹೊಂದಿರುವ ನಾವೂರ ಗ್ರಾಮದ ಮೈಂದಾಳ ನಿವಾಸಿ ನೌಫಲ್ ಎನ್.ವಿರುದ್ದ ದೂರು ನೀಡಿದ್ದಾರೆ. ಸ್ಥಳೀಯ ಕೃಷಿಕ ಮಹಿಳೆಯೊಬ್ಬರು ತಮ್ಮ ಬ್ಯಾಂಕ್ ಸಾಲದ ಮೊತ್ತ ಪಾವತಿಯ ಹಿನ್ನಲೆಯಲ್ಲಿ ವ್ಯಾಪಾರಿಯ ಬಳಿ ಹಣಕ್ಕಾಗಿ ಹೋದಾಗ ಆತ ಪರಾರಿಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಕೃಷಿಕರೆಲ್ಲರು ಒಂದಾಗಿ ಆತನ ವಿರುದ್ದ ದೂರು ನೀಡಲು ಮುಂದಾಗಿದ್ದಾರೆ.



