ಜನ ಮನದ ನಾಡಿ ಮಿಡಿತ

Advertisement

ಮಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸಿಗೆ ಮನವಿ

ಅನಿವಾಸಿ ಕನ್ನಡಿಗರ ವೇದಿಕೆ ಬಹರೈನ್ ಇದರ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಹಾಗೂ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.


ಕೊಲ್ಲಿ ದೇಶಗಳಲ್ಲಿ ಒಂದಾದ ಬಹರೈನ್ ಸುಮಾರು 20 ಸಹಸ್ರ ಕನ್ನಡಿಗರನ್ನೊಳಗೊಂಡ ಒಂದು ಪುಟ್ಟ ದೇಶ. ಕಳೆದ ಸುಮಾರು ನಾಲ್ಕೂವರೆ ದಶಕಗಳಿಂದ ಈ ದೇಶದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ಶ್ರೀಮಂತ ಪರಂಪರೆಯನ್ನು ಬಹರೈನ್ ಕನ್ನಡಿಗರಿಗೆ ಹಾಗೂ ಬಹರೈನ್ ನ ನಾಗರೀಕರಿಗೆ ಪರಿಚಯಿಸುವ ಕಾರ್ಯಗಳಾಗುತ್ತಿವೆ. ವಿವಿಧ ಸಂಘಟನೆಗಳು, ವಿವಿಧ ವೇದಿಕೆಗಳು ಕನ್ನಡಿಗರ ಸಹಾಯಕ್ಕೆ ಸ್ಪಂದಿಸುತ್ತಾ ಬಂದಿವೆ. ಕರ್ನಾಟಕ ಸರಕಾರದ ಆಶ್ರಯದಲ್ಲಿ ಸ್ಥಾಪಿತವಾದ ಅನಿವಾಸಿ ಕನ್ನಡಿಗರ ವೇದಿಕೆ ಕಳೆದ ಹಲವಾರು ವರುಷಗಳಿಂದ ತನ್ನ ಸೇವಾ ಚಟುವಟಿಕೆಗಳನ್ನು ಮಾಡುತ್ತಾ ಬಂದಿದೆ. ಕರ್ನಾಟಕ ಸರಕಾರವು ಕೊಲ್ಲಿ ದೇಶಗಳ ಅನಿವಾಸಿ ಕನ್ನಡಿಗರ ಮಕ್ಕಳನ್ನು ಕರ್ನಾಟಕದ ಕಾಲೇಜುಗಳ ಪ್ರವೇಶದ ಪ್ರಕ್ರೀಯೆಯಲ್ಲಿ ಕರ್ನಾಟಕದಲ್ಲಿರುವ ಸ್ಥಳೀಯ ಮಕ್ಕಳಂತೆಯೇ ಪರಿಗಣಿಸಬೇಕು ಹಾಗೂ ಅನಿವಾಸಿ ಕನ್ನಡಿಗರಿಗಿರುವ ನಿರ್ಬಂಧಗಳನ್ನು ಈ ಮಕ್ಕಳ ಮೇಲೆ ಹೇರಬಾರದು. ಕೊಲ್ಲಿ ಕನ್ನಡಿಗರಲ್ಲಿ ಬಹುತೇಕರು ಸಣ್ಣ ಮಟ್ಟದ ವೇತನವನ್ನು ಪಡೆಯುತ್ತಿರುವವರು, ನೀಲಿ ಕಾಲರ್ ಉದ್ಯೋಗಿಗಳು ಹಾಗೂ ಕಟ್ಟಡ ಕಾರ್ಮಿಕರು.

 

ಇದಲ್ಲದೆ, ಬಹರೇನ್ ದೇಶದ ಶಾಲೆಗಳಲ್ಲಿ ಕನ್ನಡವನ್ನು ಒಂದು ಐಚ್ಚಿಕ ವಿಷಯವನ್ನಾಗಿ ಕಲಿಸಲಾಗುತ್ತಿದೆ. ಪ್ರತೀ ಪಂಚಾಯತ್, ತಾಲೂಕು ಹಾಗೂ ಜಿಲ್ಲಾ ಕಚೇರಿಗಳಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿರುವ ಅನಿವಾಸಿ ಕನ್ನಡಿಗರಿಗೆ ಏಕ ಗವಾಕ್ಷಿ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಇದರಿಂದಾಗಿ ಸೀಮಿತ ಅವಧಿಗೆ ರಜೆಯಲ್ಲಿ ಬರುವ ಕನ್ನಡಿಗರಿಗೆ ಸಹಾಯವಾಗುತ್ತದೆ.ಸ್ಥಳ ಖರೀದಿಸುವ ಹಾಗೂ ಮನೆ ಕಟ್ಟುವ ಪ್ರಕ್ರೀಯೆಗಳಿಗಾಗಿ ಸದ್ಯದ ಪರಿಸ್ಥಿತಿಗಳಲ್ಲಿ ವರುಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡುವ ಪದ್ದತಿಯ ಬದಲು ಈ ಪ್ರಕ್ರೀಯೆಗಳನ್ನು ಅನಿವಾಸಿಗಳಿಗೆಂದೇ ಮೀಸಲಾಗಿಟ್ಟಿರುವ ಆನ್ ಲೈನ್ ಮೂಲಕ, ನಿರ್ದಿಷ್ಟ ಸಮಯದೊಳಗೆ ಸಂಪೂರ್ಣಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಈ ವ್ಯವಸ್ಥೆಯ ಸರಿಯಾದ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅನಿವಾಸಿ ಭಾರತೀಯ ಸಂಪರ್ಕಾಧಿಕಾರಿಯೊಬ್ಬರನ್ನು ನೇಮಿಸಬೇಕು. ಅನಿವಾಸಿ ಭಾರತೀಯರು ಭಾರತದಲ್ಲಿ ನೆಲೆಸಲು ಪ್ರಾರಂಭಿಸಿದಾಗ, ಮೂರು ತಿಂಗಳಲ್ಲಿ ಅವರ ಎನ್‌ಆರ್‌ಇ ಬ್ಯಾಂಕ್ ಖಾತೆಯನ್ನು ಸ್ಥಳೀಯ ಖಾತೆಯನ್ನಾಗಿ ಪರಿವರ್ತಿಸಲಾಗುತ್ತದೆ. ಮಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಹಾಗೂ ಇತರ ಸಿಬಂದಿಗಳ ಬೇಜಾವಾಬ್ದಾರಿಯಿಂದಾಗಿ ಗೌರವಾನ್ವಿತ ಪ್ರಯಾಣಿಕರು ಮುಜುಗರವನ್ನು ಅನುಭವಿಸುವುದು ಆಗಾಗ್ಗೆ ಕಂಡು ಬರುತ್ತಿದೆ. ಕಾನೂನುಗಳನ್ನು ಮೀರುವ ಪ್ರಯಾಣಿಕರನ್ನು ಸೂಕ್ತ ರೀತಿಯಲ್ಲಿ ಶಿಕ್ಷಿಸಬೇಕು ಆದರೆ ಇತರ ಎಲ್ಲ ಪ್ರಯಾಣಿಕರನ್ನು ಗೌರವಪೂರ್ವಕವಾಗಿ ನೋಡಿಕೊಳ್ಳಬೇಕು. ಇಮಿಗ್ರೇಷನ್ ಹಾಗೂ ಕಸ್ಟಮ್ಸ್ ವಿಭಾಗದ ಸಿಬ್ಬಂದಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿಶೇಷ ಕೌಂಟರ್ ಗಳನ್ನೂ ತೆರೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!